ಬೇಕೆಂದೇ ಮಾಧ್ಯಮಗಳನ್ನು ಅವಾಯ್ಡ್ ಮಾಡ್ತಿದ್ದಾರಾ ಕೊಹ್ಲಿ? ದ್ರಾವಿಡ್ ಹೇಳಿದ್ದು ಹೀಗೆ!
ಸಾಮಾನ್ಯವಾಗಿ ನಾಯಕ, ಉಪನಾಯಕ ಮಾಧ‍್ಯಮಗೋಷ್ಠಿಯಲ್ಲಿ ಭಾಗಿಯಾಗುತ್ತಾರೆ. ಆದರೆ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮಗೋಷ್ಠಿಗೆ ಬರುತ್ತಲೇ ಇಲ್ಲ. ಹೀಗಾಗಿ ಅವರನ್ನು ಬೇಕೆಂದೇ ಹೀಗೆ ಮಾಡುತ್ತಿದ್ದಾರಾ ಎಂದು ಮಾಧ‍್ಯಮಗಳು ಕೋಚ್ ರಾಹುಲ್ ದ್ರಾವಿಡ್ ರನ್ನು ಪ್ರಶ್ನೆ ಮಾಡಿವೆ.
ಈ ಅನುಮಾನಗಳನ್ನು ತಳ್ಳಿ ಹಾಕಿರುವ ದ್ರಾವಿಡ್, ಕೊಹ್ಲಿ ತಮ್ಮ 100 ನೇ ಟೆಸ್ಟ್ ಗೆ ಮುನ್ನ ನಡೆಯಲಿರುವ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಆಫ್ರಿಕಾ ವಿರುದ್ಧ ಜನವರಿ 11 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಲಿದೆ.