ಐಪಿಎಲ್ ಬಹುಮಾನ ಮೊತ್ತ ಕಡಿತ: ಕಾರಣವೇನು ಗೊತ್ತಾ?
ಕಳೆದ ಬಾರಿ ಐಪಿಎಲ್ ಗೆದ್ದ ತಂಡಕ್ಕೆ 20 ಕೋಟಿ ರೂ., ರನ್ನರ್ ಅಪ್ ಆದ ತಂಡಕ್ಕೆ 10 ಕೋಟಿ ರೂ. ಬಹುಮಾನ ಲಭಿಸಿತ್ತು. ಆದರೆ ಈ ಬಾರಿ ಗೆದ್ದ ತಂಡ 10 ಕೋಟಿ ರೂ., ರನ್ನರ್ ಅಪ್ ಆದ ತಂಡ 5 ಕೋಟಿ ರೂ.ಗಳಷ್ಟೇ ಜೇಬಿಗಿಳಿಸಲಿದೆ. ಈ ಮೂಲಕ ವೆಚ್ಚ ಕಡಿತಕ್ಕೆ ಯೋಜನೆ ರೂಪಿಸಿದೆ.