ಬ್ರೆಜಿಲ್ ರಿಯೊ ಡಿ ಜನೈರೊನಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಐಸಿಸ್ ಉಗ್ರಗಾಮಿಗಳ ಕರಿನೆರಳು ಚಾಚಿದೆ. ಜಿಹಾದಿ ಸಂದೇಶದ ಚಾನೆಲ್ಲೊಂದು ಒಲಿಂಪಿಕ್ಸ್ ಮೇಲೆ ದಾಳಿಮಾಡುವಂತೆ ಕರೆ ನೀಡಿದ ಬಳಿಕ ಬ್ರೆಜಿಲ್ ಗುಪ್ತಚರ ಸಂಸ್ಥೆ ಎಚ್ಚೆತ್ತಿದೆ. ಮೆಸೇಜಿಂಗ್ ಆಪ್ ಟೆಲಿಗ್ರಾಂನಲ್ಲಿ ಜಿಹಾದಿ ಚಾನೆಲ್ ಕ್ರೀಡಾಕೂಟ ಮತ್ತು ವಿಸ್ತ್ರತ ಗುರಿಗಳ ಮೇಲೆ ದಾಳಿಗೆ ಕರೆನೀಡಿರುವುದಾಗಿ ಸೈಟ್ ಗುಪ್ತಚರ ಸಂಸ್ಥೆ ತಿಳಿಸಿದೆ.
ಈ ನಡುವೆ ಬ್ರೆಜಿಲ್‌ನಲ್ಲಿ ಜಿಹಾದಿ ಚಟುವಟಿಕೆ ಮತ್ತು ಯಾವುದೇ ಸ್ಥಿರ ಭಯೋತ್ಪಾದನೆ ಜಾಲಗಳ ಇತಿಹಾಸವಿಲ್ಲ ಎಂದು ಭದ್ರತಾ ತಜ್ಞರು ಹೇಳಿದ್ದು, ಒಲಿಂಪಿಕ್ಸ್‌ನಲ್ಲಿ ಸಂಕೀರ್ಣ ದಾಳಿ ಮಾಡುವುದು ಕಷ್ಟ ಎಂದಿದ್ದಾರೆ. ಆದಾಗ್ಯೂ ಅನೇಕ ನಗರಗಳ ರೀತಿಯಲ್ಲಿ ಒಬ್ಬ ವ್ಯಕ್ತಿ ಅಥವಾ ಏಕಾಂಗಿ ತೋಳನ ಬೆದರಿಕೆಯನ್ನು ರಿಯೊ ಎದುರಿಸುತ್ತಿದೆ.