ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಮಳೆಯ ಬಳಿಕ ಪುನರಾರಂಭವಾಗಿದೆ.
ಬೆಳ್ಳಂ ಬೆಳಿಗ್ಗೆಯೇ ಮಳೆಯಿಂದಾಗಿ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದ್ದಾಗ ಆಟ ಸ್ಥಗಿತಗೊಂಡಿತ್ತು. ಇದಾದ ಬಳಿಕ ಊಟದ ವಿರಾಮವೆಲ್ಲಾ ಮುಗಿದು ಮತ್ತೆ ಪಂದ್ಯ ಆರಂಭವಾಗಿದೆ. ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ನಿಧಾನವಾಗಿ ಇನಿಂಗ್ಸ್ ಕಟ್ಟುತ್ತಾ ಟೀಂ ಇಂಡಿಯಾ ಬೌಲರ್ ಗಳಿಗೆ ತಲೆನೋವಾಗುವ ಲಕ್ಷಣ ತೋರಿದ್ದರು. ಇದಕ್ಕೆ ತಕ್ಕಂತೆ ವಿಕೆಟ್ ಕೀಪರ್ ರಿಷಬ್ ಪಂತ್ ಕ್ರೀಸ್ ನಲ್ಲಿರುವ ಲಬುಶೇನ್ ಮತ್ತು ಪುಕೋವ್ ಸ್ಕಿ ನೀಡಿದ ಕ್ಯಾಚ್ ನ್ನು ಎರಡು ಬಾರಿ ನೆಲಕ್ಕೆ ಹಾಕುವುದರೊಂದಿಗೆ ಭಾರತದ ಪಾಲಿಗೆ ವಿಲನ್ ಆದರು. ಈ ಮೂಲಕ ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ ಆಸೀಸ್ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ.