ಸ್ವಹಿತಾಸಕ್ತಿ ಸಂಘರ್ಷದಲ್ಲಿ ವಿರಾಟ್ ಕೊಹ್ಲಿ

ಗುರುವಾರ, 7 ಜನವರಿ 2021 (10:00 IST)
ಮುಂಬೈ: ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ತಂಡದ ಕಿಟ್ ಸ್ಪಾನ್ಸರ್ ಎಂಪಿಎಲ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವುದು ಈಗ ಅವರನ್ನು ಸಂಕಷ್ಟಕ್ಕೀಡುಮಾಡಿದೆ.


ಕೊಹ್ಲಿ ಭಾರತೀಯ ತಂಡದ ಕಿಟ್ ಸ್ಪಾನ್ಸರ್ ಆಗಿರುವ ಮೊಬೈಲ್ ಪ್ರೀಮಿಯರ್ ಲೀಗ್ ಮಾಲಿಕತ್ವದ ಜಿಎಫ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 2019 ರಲ್ಲಿ ಹೂಡಿಕೆ ಮಾಡಿದ್ದರು. ಇದು ಸ್ವ ಹಿತಾಸಕ್ತಿ ಸಂಘರ್ಷಕ್ಕೀಡು ಮಾಡುತ್ತದೆ. ಬಿಸಿಸಿಐಗೆ ಸಂಬಂಧಪಟ್ಟ ಹುದ್ದೆಯಲ್ಲಿರುವವರು ಅದರ ಜೊತೆ ಸಂಬಂಧ ಬೆಳೆಸುವ ಸಂಸ್ಥೆಗಳೊಂದಿಗೆ ವೈಯಕ್ತಿಕ ಲಾಭ ತರುವ ಹುದ್ದೆ ಅಥವಾ ಹೂಡಿಕೆ ಮಾಡುವಂತಿಲ್ಲ. ಹೀಗಾಗಿ ಇದು ಅವರನ್ನು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ