ನೀವು ನನ್ನ ಹೀರೋ: ಕೋಚ್ ದ್ರಾವಿಡ್ ಗೆ ಕೊಹ್ಲಿ ಭಾವುಕ ಮಾತು
ಮೊಹಾಲಿ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಡೀ ಟೀಂ ಇಂಡಿಯಾ ಕ್ರಿಕೆಟಿಗರು ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಉಪಸ್ಥಿತಿಯಲ್ಲಿ ಕೊಹ್ಲಿಗೆ ಕೋಚ್ ರಾಹುಲ್ ದ್ರಾವಿಡ್ ಕೈಯಿಂದ ವಿಶೇಷ ಕ್ಯಾಪ್ ಗೌರವ ಪೂರ್ವಕವಾಗಿ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಕೊಹ್ಲಿ, ಇದು ನನ್ನ ವಿಶೇಷ ಕ್ಷಣ. ನನ್ನ ಪತ್ನಿ, ಸಹೋದರ, ಕೋಚ್ ಮತ್ತು ಇಡೀ ಕುಟುಂಬವೇ ಇಲ್ಲಿದ್ದಾರೆ. ಎಲ್ಲರಿಗೂ ಇದು ಹೆಮ್ಮೆಯ ಕ್ಷಣ. ಇದು ತಂಡವಾಗಿ ಆಡಿದ್ದಕ್ಕೆ ಸಿಕ್ಕ ಪ್ರತಿಫಲ. ಇದಕ್ಕೆ ಬಿಸಿಸಿಐಗೆ ಧನ್ಯವಾದ ಸಲ್ಲಿಸಬೇಕು. ರಾಹುಲ್ ಭಾಯ್, ನೀವು ನನ್ನ ಬಾಲ್ಯದ ಹೀರೋ. ನಿಮ್ಮ ಜೊತೆ ಅಂಡರ್ 19 ಕ್ರಿಕೆಟ್ ವೇಳೆ ತೆಗೆಸಿಕೊಂಡ ಫೋಟೋ ಈಗಲೂ ನನ್ನ ಬಳಿಯಿದೆ. ನಿಮ್ಮ ಕೈಯಿಂದಲೇ ಈವತ್ತು ಈ ಗೌರವ ಸಿಕ್ಕಿದ್ದು ನನ್ನ ಪಾಲಿಗೆ ವಿಶೇಷ ಎಂದು ಧನ್ಯವಾದ ಸಲ್ಲಿಸಿದ್ದಾರೆ.