ಸೋಲಿನ ನಡುವೆ ಟೀಂ ಇಂಡಿಯಾಕ್ಕೆ ಸಿಕ್ಕಿದ ಸಮಾಧಾನವೇನು ಗೊತ್ತಾ?
ಬುಧವಾರ, 12 ಸೆಪ್ಟಂಬರ್ 2018 (08:51 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 118 ರನ್ ಗಳಿಂದ ಸೋತರೂ ರಿಷಬ್ ಪಂತ್ ರೂಪದಲ್ಲಿ ಸಮಾಧಾನ ಸಿಕ್ಕಿದೆ.
ಭಾರತ ಟೆಸ್ಟ್ ತಂಡಕ್ಕೆ ಒಬ್ಬ ಪ್ರತಿಭಾವಂತ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ತಲಾಷೆಯಲ್ಲಿದ್ದ ಟೀಂ ಇಂಡಿಯಾಗೆ ಪಂತ್ ರೂಪದಲ್ಲಿ ಆ ಪ್ರತಿಭೆ ಸಿಕ್ಕಿದೆ. ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾ ಪಾಲಿಗೆ ಅಭಿಮನ್ಯುವಿನಂತೆ ಏಕಾಏಕಿ ಇಂಗ್ಲೆಂಡ್ ಕೋಟೆಗೆ ನುಗ್ಗಿದ ರಿಷಬ್ ಪಂತ್ ಯರ್ರಾ ಬಿರ್ರಿ ಶಾಟ್ ಹೊಡೆದು ಎದುರಾಳಿಗಳ ಎದೆ ನಡುಗಿಸಿದರು. ಆದರೆ ಅವರ ಅಬ್ಬರದ ಶತಕ 114 ಕ್ಕೆ ಕೊನೆಯಾಯಿತು. ಇದರೊಂದಿಗೆ ಇಂಗ್ಲೆಂಡ್ ಗೆಲುವು ಖಾತ್ರಿಯಾಯಿತು.
ಇದಕ್ಕೂ ಮೊದಲು ಕೆಎಲ್ ರಾಹುಲ್ 149 ರನ್ ಗೆ ವಿಕೆಟ್ ಒಪ್ಪಿಸಿದರು. ಒಂದು ವೇಳೆ ಪಂತ್ ಗೆ ಪ್ರಥಮ ಇನಿಂಗ್ಸ್ ನಲ್ಲಿ 80 ರನ್ ಗಳಿಸಿದ್ದ ರವೀಂದ್ರ ಜಡೇಜಾ ದ್ವಿತೀಯ ಇನಿಂಗ್ಸ್ ನಲ್ಲೂ ಜತೆಯಾಗಿದ್ದರೆ ಪಂದ್ಯದ ಕತೆಯೇ ಬೇರೆಯಾಗುತ್ತಿತ್ತೇನೋ. ಆದರೆ ದುರದೃಷ್ಟವಶಾತ್ ಹಾಗೇನೂ ಆಗಲಿಲ್ಲ. ಟೀಂ ಇಂಡಿಯಾ 1-3 ಅಂತರದಿಂದ ಸರಣಿ ಸೋಲು ಅನುಭವಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.