ಬೇಡವೆಂದರೂ ಸ್ಲೆಡ್ಜಿಂಗ್ ಮಾಡಿದ್ದೇಕೆಂದು ಕಾರಣ ಬಿಚ್ಚಿಟ್ಟ ರಿಷಬ್ ಪಂತ್
‘ಬ್ಯಾಟ್ಸ್ ಮನ್ ಗಳಿಗೆ ಕಾಟ ಕೊಡುವುದನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಎದುರಾಳಿ ಬ್ಯಾಟ್ಸ್ ಮನ್ ಗಳ ಗಮನ ಬೌಲರ್ ಗಳ ಕಡೆಗೆ ಇರಬಾರದು, ನನ್ನ ಕಡೆಗೆ ಇರಬೇಕು ಎಂದು ಹಾಗೆ ಮಾಡುತ್ತಿದ್ದೆ’ ಎಂದು ರಿಷಬ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಇದು ರಿಷಬ್ ಪಾಲಿಗೆ ಅದ್ಭುತ ಪಂದ್ಯವಾಗಿತ್ತು. ಆಸೀಸ್ ನ 20 ವಿಕೆಟ್ ಗಳ ಪೈಕಿ 11 ಕ್ಯಾಚ್ ಪಡೆದು ರಿಷಬ್ ದಾಖಲೆ ನಿರ್ಮಿಸಿದ್ದರು.