ಮುಂದಿನ ಐಪಿಎಲ್ ನಲ್ಲಿ ರಿಷಬ್ ಪಂತ್ ಆಡ್ತಾರೆ: ಗಂಗೂಲಿ
ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುತ್ತಾರೆ. ಟೀಂ ಇಂಡಿಯಾಗೆ ಕಾಲಿಡುವ ಮೊದಲು ರಿಷಬ್ ಐಪಿಎಲ್ ಪರ ಆಡಲಿದ್ದಾರೆ. ಈ ವಿಚಾರವನ್ನು ಡೆಲ್ಲಿ ಮೆಂಟರ್ ಸೌರವ್ ಗಂಗೂಲಿ ಹೇಳಿದ್ದಾರೆ.
ಇತ್ತೀಚೆಗೆ ರಿಷಬ್ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸದ್ಯಕ್ಕೆ ಅವರು ಅಭ್ಯಾಸ ನಡೆಸಲ್ಲ. ಆದರೆ ಮುಂದಿನ ಐಪಿಎಲ್ ವೇಳೆಗೆ ಫಿಟ್ ಆಗಿ ತಂಡಕ್ಕೆ ಬರಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.