Rishabh Pant: ಅದೊಂದು ಕಾರಣಕ್ಕೆ ಹೀರೋ ಆದ ರಿಷಭ್ ಪಂತ್

Sampriya

ಬುಧವಾರ, 28 ಮೇ 2025 (16:59 IST)
Photo Credit X
ಮಂಗಳೂರು: ಜಿತೇಶ್ ಶರ್ಮಾ ಇದ್ದರೆ ತನ್ನ ತಂಡ ಸೋಲುತ್ತೆ ಅಂತ ಗೊತ್ತಿದ್ದರೂ, ಮೋಸದ ಆಟ ಬೇಡ ಎಂದು ಅಂಪೈರ್‌ ಡಿಸಿಷನ್ ನೀಡುವ ಮೊದಲೇ ಕ್ರೀಡಾಸ್ಪೂರ್ತಿ ತೋರಿದ ರಿಷಭ್ ಪಂತ್‌ ನಡವಳಿಕೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಆರ್‌ಸಿಬಿ ಗೆದ್ದು ಬೀಗಿತು.

ಆದರೆ ಪಂದ್ಯ ಸೋತರು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಕ್ರೀಡಾ ಸ್ಫೂರ್ತಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಎಲ್‌ಎಸ್‌ಜಿಯ ಬೌಲರ್‌ ದಿಗ್ವೇಶ್ ರಾಠಿ ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ಆರ್‌ಸಿಬಿ ಜಿತೇಶ್ ಶರ್ಮಾ ಅವರನ್ನು ರನೌಟ್ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಮೂರನೇ ಅಂಪೈರ್ ದೊಡ್ಡ ಪರದೆಯಲ್ಲಿ ಡಿಸಿಷನ್ ನೀಡುವ ಮೊದಲೇ ಲಕ್ನೋ ನಾಯಕ ರಿಷಬ್ ಪಂತ್ ಮನವಿಯನ್ನು ಹಿಂಪಡೆಯಲು ನಿರ್ಧರಿಸಿದರು.

ಪಂತ್ ಅವರ ನಿರ್ಧಾರವನ್ನು ಹೇಳಿದಾಗ ಜಿತೇಶ್ ಅವರನ್ನು ಅಪ್ಪಿಕೊಂಡರು. ಈ ಮೂಲಕ RCB ಸ್ಟಾರ್ ಕ್ರೀಸ್‌ನಲ್ಲಿ ಉಳಿಯಲು ಸಹಾಯ ಮಾಡಿದರು. ರಿಷಬ್ ಪಂತ್ ಅವರ ಕ್ರೀಡಾಸ್ಫೂರ್ತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಂದ್ಯ ಸೋತಿರಬಹುದು, ಆದರೆ ನಿಮ್ಮ ಕ್ರೀಡಾಸ್ಫೂರ್ತಿ ಎಲ್ಲರ ಮನಸ್ಸನ್ನು ಗೆಲ್ಲಿಸಿದೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ