ರೋಡ್ ಸೇಫ್ಟೀ ಟೂರ್ನಮೆಂಟ್: ಸಿನಿ ಪ್ರೇಕ್ಷಕರನ್ನು ಕ್ರಿಕೆಟ್ ಗೆ ಸೆಳೆಯಲು ಪ್ಲ್ಯಾನ್
ಹಿಂದೆಯೂ ಹಲವು ಬಾರಿ ಅದರಲ್ಲೂ ಸೆಟ್ ಮ್ಯಾಕ್ಸ್ ವಾಹಿನಿ ಐಪಿಎಲ್ ನ್ನು ತನ್ನ ವಾಹಿನಿಯಲ್ಲಿ ನೇರಪ್ರಸಾರ ಮಾಡುವ ಮೂಲಕ ತನ್ನ ವಾಹಿನಿಯ ಸಿನಿಮಾ ಪ್ರೇಕ್ಷಕರನ್ನು ಕ್ರಿಕೆಟ್ ಗೆ ಸೆಳೆಯಲು ತಂತ್ರ ಹೆಣೆದಿತ್ತು. ಈಗ ವಯೋಕಾಮ್ ನೆಟ್ ವರ್ಕ್ ಕೂಡಾ ಅದನ್ನೇ ಮಾಡುತ್ತಿದ್ದು, ಆ ಮೂಲಕ ರಸ್ತೆ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಯನ್ನು ಜನಪ್ರಿಯಗೊಳಿಸಲು ಯೋಜನೆ ರೂಪಿಸಿದೆ.