ದ್ವಿತೀಯ ಟೆಸ್ಟ್ ಆಡಲು ಪೃಥ್ವಿ ಶಾ ಫಿಟ್
ಪ್ರಾಕ್ಟೀಸ್ ತಪ್ಪಿಸಿಕೊಂಡಿದ್ದ ಪೃಥ್ವಿ ದ್ವಿತೀಯ ಟೆಸ್ಟ್ ಪಂದ್ಯದ ವೇಳೆಗೆ ಫಿಟ್ ಆಗದೇ ಇದ್ದರೆ ಶಬ್ನಂ ಗಿಲ್ ಆಡಲು ಸಿದ್ಧರಾಗಿದ್ದರು. ಆದರೆ ಇದೀಗ ಪೃಥ್ವಿ ಫಿಟ್ ಆಗಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ಉಳಿದಂತೆ ಈ ಪಂದ್ಯಕ್ಕೆ ರವಿಚಂದ್ರನ್ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾರನ್ನು ಆಡಿಸುವ ತೀರ್ಮಾನವನ್ನು ನಾಳೆ ಬೆಳಿಗ್ಗೆ ತೆಗೆದುಕೊಳ್ಳಲಾಗುವುದು ಎಂದು ಶಾಸ್ತ್ರಿ ಹೇಳಿದ್ದಾರೆ.