ಯುವರಾಜ್ ಸಿಂಗ್ ವೃತ್ತಿ ಜೀವನವನ್ನೇ ಫಿನಿಶ್ ಮಾಡಿದ್ದ ವಿರಾಟ್ ಕೊಹ್ಲಿ: ಶಾಕಿಂಗ್ ಸತ್ಯ ಹೇಳಿದ ರಾಬಿನ್ ಉತ್ತಪ್ಪ

Krishnaveni K

ಶುಕ್ರವಾರ, 10 ಜನವರಿ 2025 (12:57 IST)
Photo Credit: X
ಮುಂಬೈ: ಟೀಂ ಇಂಡಿಯಾ 2011 ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಲು ಕಾರಣರಾಗಿದ್ದ ಯುವರಾಜ್ ಸಿಂಗ್ ವೃತ್ತಿ ಜೀವನವನ್ನು ಫಿನಿಶ್ ಮಾಡಿದ್ದು ವಿರಾಟ್ ಕೊಹ್ಲಿ ಎಂಬ ಶಾಕಿಂಗ್ ಸತ್ಯವನ್ನು ರಾಬಿನ್ ಉತ್ತಪ್ಪ ರಿವೀಲ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ರಾಬಿನ್ ಉತ್ತಪ್ಪ ಈ ವಿಚಾರ ಹೇಳಿದ್ದಾರೆ. 2011 ರ ಏಕದಿನ ವಿಶ್ವಕಪ್ ವೇಳೆಯೇ ಯುವರಾಜ್ ಸಿಂಗ್ ತೀರಾ ಕೆಮ್ಮುತ್ತಿದ್ದರು. ಅದಾದ ಬಳಿಕ ಅವರಿಗೆ ಕ್ಯಾನ್ಸರ್ ಇರುವುದು ಖಚಿತವಾಯಿತು. ಹೀಗಾಗಿ ಅವರು ಅಮೆರಿಕಾದಲ್ಲಿ ಟ್ರೀಟ್ ಮೆಂಟ್ ಗೆ ತೆರಳಿದ್ದರು.

ಯುವಿ ಕ್ಯಾನ್ಸರ್ ಗೆದ್ದು ಭಾರತಕ್ಕೆ ಮರಳಿದ ಮೇಲೆ ಕೆಲವು ದಿನ ಕ್ರಿಕೆಟ್ ನಿಂದ ದೂರವಿದ್ದರು. ಅದಾದ ಬಳಿಕ ಅವರು ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದರು. ಆದರೆ ಕೆಲವೇ ಪಂದ್ಯಗಳಲ್ಲಿ ಮಾತ್ರ ಆಡಿದ್ದರು.

ಕ್ಯಾನ್ಸರ್ ಗೆದ್ದರೂ ಯುವಿಗೆ ಮೊದಲಿನ ದೈಹಿಕ ಕ್ಷಮತೆಯಿರಲಿಲ್ಲ. ಹೀಗಾಗಿ ಆಗ ಜಾರಿಯಲ್ಲಿದ್ದ ಎಲ್ಲಾ ಕಠಿಣ ಫಿಟ್ನೆಸ್ ಟೆಸ್ಟ್ ಗಳನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಮಗೆ ಸ್ವಲ್ಪ ವಿನಾಯ್ತಿ ಕೊಡುವಂತೆ ಟೀಂ ಮ್ಯಾನೇಜ್ ಮೆಂಟ್ ಗೆ ಮನವಿ ಮಾಡಿದ್ದರು.

ಆಗ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿ ಯುವಿ ಮನವಿಯನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಯುವಿ ಅನಿವಾರ್ಯವಾಗಿ ವೃತ್ತಿ ಜೀವನ ಕೊನೆಗೊಳಿಸಬೇಕಾಯಿತು ಎಂದು ರಾಬಿನ್ ಉತ್ತಪ್ಪ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ