ಫೇಮ್, ನೇಮ್ ಬಿಟ್ಟು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದೇಶೀಯ ಕ್ರಿಕೆಟ್ ಗೆ
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಮೇಲೆ ಅಸಮಾಧಾನದ ಹೊಳೆ ಹರಿಯುತ್ತಿದೆ. ಸ್ವತಃ ಕೋಚ್ ಗೌತಮ್ ಗಂಭೀರ್, ಎಲ್ಲಾ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ಆಡಬೇಕು ಎಂದು ಹುಕುಂ ಹೊರಡಿಸಿದ್ದಾರೆ.
ಇದನ್ನು ನೋಡಿದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ದೇಶೀಯ ಕ್ರಿಕೆಟ್ ಆಡಲೇ ಬೇಕು ಎಂಬ ನಿಯಮ ಬರಬಹುದು. ಈ ನಿಯಮ ಈಗಾಗಲೇ ಇದ್ದರೂ ರೋಹಿತ್, ಕೊಹ್ಲಿಯಂತಹ ಸ್ಟಾರ್ ಕ್ರಿಕೆಟಿಗರಿಗೆ ಅನ್ವಯವಾಗುತ್ತಿರಲಿಲ್ಲ.
ಆದರೆ ಇನ್ನು ಮುಂದೆ ಕೊಹ್ಲಿ, ರೋಹಿತ್ ಕೂಡಾ ಟೀಂ ಇಂಡಿಯಾದಲ್ಲಿ ಮುಂದುವರಿಯಬೇಕಾದರೆ ಕೆಲವು ಪಂದ್ಯಗಳನ್ನಾದರೂ ತಮ್ಮ ತವರು ರಾಜ್ಯದ ಪರ ಆಡಬೇಕಾಗಬಹುದು.