ICC Ranking: ಅಗ್ರ 25ರಿಂದಲೂ ಹೊರಬಿದ್ದ ಕಿಂಗ್‌ ಕೊಹ್ಲಿ: ಹಿಟ್ಟರ್‌ ಪಂತ್‌ಗೆ ಸಿಕ್ತು ಭರ್ಜರಿ ಬಡ್ತಿ

Sampriya

ಬುಧವಾರ, 8 ಜನವರಿ 2025 (15:58 IST)
Photo Courtesy X
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಬಿಡುಗಡೆ ಮಾಡಿದ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಭಾರತದ ರಿಷಭ್‌ ಪಂತ್‌ ಬಡ್ತಿ ಪಡೆದಿದ್ದರೆ, ವಿರಾಟ್‌ ಕೊಹ್ಲಿ ಮತ್ತಷ್ಟು ಕುಸಿತಕ್ಕೆ ಒಳಗಾಗಿದ್ದಾರೆ.

ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ರಿಷಬ್ ಪಂತ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಅಷ್ಟೊಂದು ಅದ್ಭುತವಾಗಿರದಿದ್ದರೂ, ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರ 61 ರನ್‌ಗಳ ಇನ್ನಿಂಗ್ಸ್ ಈ ಯಶಸ್ಸಿಗೆ ಕಾರಣ. ಭಾರತದ ಜೈಸ್ವಾಲ್ ಕೂಡ ಟಾಪ್ 10ರಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಗಿಲ್ ಅವರ ಶ್ರೇಯಾಂಕ ಕುಸಿದಿದೆ.  

ಭಾರತದ ಯಶಸ್ವಿ ಜೈಸ್ವಾಲ್ ಅವರು 847 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಟಾಪ್ 10 ರೊಳಗೆ ಕಾಣಿಸಿಕೊಂಡಿರುವ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಏಕೈಕ ಶತಕವನ್ನು ಸಿಡಿಸಿದನ್ನು ಬಿಟ್ಟರೆ, ಉಳಿದಂತೆ ಒಂದಂಕಿ ದಾಟುವುದಕ್ಕೂ ಕಷ್ಟಪಟ್ಟಿದ್ದ ವಿರಾಟ್ ಕೊಹ್ಲಿ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಕುಸಿತ ಕಂಡಿದ್ದು, ಮೂರು ಸ್ಥಾನ ಕಳೆದುಕೊಳ್ಳುವುದರೊಂದಿಗೆ 27ನೇ ಸ್ಥಾನಕ್ಕೆ ಜಾರಿದ್ದರೆ, ಇತ್ತ ಶುಭ್​ಮನ್ ಗಿಲ್ ಕೂಡ 3 ಸ್ಥಾನ ಕಳೆದುಕೊಂಡು 23ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ಈ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ 895 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದರೆ, ಇಂಗ್ಲೆಂಡ್‌ನ ಮತ್ತೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ 876 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 867 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ