ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗೆ ಮುನ್ನ ರೋಹಿತ್ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ರೋಹಿತ್ ಮಾಧ್ಯಮಗೋಷ್ಠಿ ಎಂದರೆ ಅಲ್ಲಿ ತಮಾಷೆ, ನಗು ಇದ್ದೇ ಇರುತ್ತದೆ. ಅದೇ ರೀತಿ ಇಂದೂ ರೋಹಿತ್ ಎದುರಾಳಿಗಳಿಗೆ ತಮ್ಮದೇ ಶೈಲಿಯಲ್ಲಿ ಗುದ್ದು ಕೊಟ್ಟಿದ್ದಾರೆ.
ಇದರ ಬಗ್ಗೆ ಇಂದು ರೋಹಿತ್ ಗೆ ಪ್ರಶ್ನಿಸಿದಾಗ ನಕ್ಕ ಅವರು ಅರೇ.. ಅವರೂ ಸ್ವಲ್ಪ ಮಜಾ ಮಾಡಲಿ ಬಿಡಿ ಗೆಳೆಯ ಎಂದು ಕಾಲೆಳೆದಿದ್ದಾರೆ. ಎಲ್ಲಾ ತಂಡಗಳೂ ಭಾರತವನ್ನು ಸೋಲಿಸಲು ಬಯಸುತ್ತವೆ. ಅದೇ ರೀತಿ ಬಾಂಗ್ಲಾ ತಂಡವೂ ಸ್ವಲ್ಪ ಮಜಾ ಅನುಭವಿಸಲಿ. ಇದಕ್ಕೆ ಮೊದಲು ಇಂಗ್ಲೆಂಡ್ ಬಂದಾಗ ಅವರೂ ಮಾಧ್ಯಮಗಳ ಮುಂದೆ ಸಾಕಷ್ಟು ಕೊಚ್ಚಿಕೊಂಡರು. ಆದರೆ ಅವರು ತಮ್ಮ ಆಟದ ಬಗ್ಗೆ ಗಮನ ಕೊಡಲು ಮರೆತರು. ಆದರೆ ನಾವು ವಿರೋಧಿ ತಂಡದ ವಿರುದ್ಧ ಆಲೋಚನೆ ಮಾಡದೇ ನಮ್ಮ ಆಟದ ಸುಧಾರಣೆ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತೇವೆ ಎಂದಿದ್ದಾರೆ.