ಬಾಂಗ್ಲಾದೇಶ ಮಣಿಸಲು ಅಚ್ಚರಿಯ ಅಸ್ತ್ರ ರೆಡಿ ಮಾಡ್ತಿದ್ದಾರೆ ರೋಹಿತ್ ಶರ್ಮಾ, ಗೌತಮ್ ಗಂಭೀರ್

Krishnaveni K

ಸೋಮವಾರ, 16 ಸೆಪ್ಟಂಬರ್ 2024 (14:22 IST)
ಚೆನ್ನೈ: ಪಾಕಿಸ್ತಾನವನ್ನು ಮಣಿಸಿರುವ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಆಘಾತ ನೀಡಲು ಈಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ಹೊಸ ಅಸ್ತ್ರ ರೆಡಿ ಮಾಡುತ್ತಿದ್ದಾರೆ.

ಗೌತಮ್ ಗಂಭೀರ್ ಬೌಲರ್ ಗಳ ಕೈಯಲ್ಲೂ ಬ್ಯಾಟಿಂಗ್, ಬ್ಯಾಟರ್ ಗಳ ಕೈಯಲ್ಲೂ ಬೌಲಿಂಗ್ ಮಾಡಿಸುವುದರಲ್ಲಿ ಎಕ್ಸ್ ಪರ್ಟ್. ಐಪಿಎಲ್ ನಲ್ಲಿ ಸುನಿಲ್ ನರೈನ್ ರನ್ನು ಆರಂಭಿಕ ಬ್ಯಾಟಿಗರಾಗಿ ಪರಿವರ್ತಿಸಿದ್ದೇ ಇದಕ್ಕೆ ಉತ್ತಮ ಉದಾಹರಣೆ. ಇದೀಗ ಭಾರತ ತಂಡದಲ್ಲೂ ಅದೇ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಬಾಂಗ್ಲಾದೇಶಕ್ಕೆ ಅಚ್ಚರಿಯ ಅಸ್ತ್ರವೊಂದನ್ನು ರೆಡಿ ಮಾಡುತ್ತಿದ್ದಾರೆ. ಅವರೇ ಯಶಸ್ವಿ ಜೈಸ್ವಾ.ಲ್. ಸದ್ಯಕ್ಕೆ ಯಶಸ್ವಿ ಜೈಸ್ವಾಲ್ ಆರಂಭಿಕ ಬ್ಯಾಟಿಗರಾಗಿದ್ದಾರೆ. ಆದರೆ ಅವರಿಗೆ ಈಗ ಟೀಂ ಇಂಡಿಯಾ ಪಾಳಯದಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಅಭ್ಯಾಸ ನೀಡಲಾಗುತ್ತಿದೆ. ಬಾಂಗ್ಲಾ ವಿರುದ್ಧ ಭಾರತ ತಂಡದ ಅಚ್ಚರಿಯ ಅಸ್ತ್ರ ಅವರೇ ಆಗಲಿದ್ದಾರೆ ಎನ್ನಲಾಗಿದೆ.

ಭಾರತಕ್ಕೆ ಬಂದಿಳಿದಿರುವ ಬಾಂಗ್ಲಾದೇಶ ತಂಡ ಈಗಾಗಲೇ ಭಾರತದ ಪ್ರಮುಖ ಬೌಲರ್ ಗಳನ್ನು ಎದುರಿಸಲು ತಯಾರಿ ನಡೆಸಿರುತ್ತದೆ. ಆದರೆ ಅವರಿಗೆ ಜೈಸ್ವಾಲ್ ಒಬ್ಬ ಅಚ್ಚರಿಯ ಬೌಲರ್ ಆಗಬಹುದು. ಅಲ್ಲದೆ, ಚೆನ್ನೈ ಪಿಚ್ ಸ್ಪಿನ್ನರ್ ಗಳಿಗೆ ಸಹಕರಿಸುವುದರಿಂದ ಜೈಸ್ವಾಲ್ ಕ್ಲಿಕ್ ಆಗಬಹುದು ಎಂಬುದು ರೋಹಿತ್-ಗಂಭೀರ್ ಲೆಕ್ಕಾಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ