ಅಪ್ಪಂದಿರ ದಿನಕ್ಕೆ ಮಗಳ ಜೊತೆ ಕ್ಯೂಟ್ ಫೋಟೋ ಹಂಚಿಕೊಂಡ ರೋಹಿತ್ ಶರ್ಮಾ

ಭಾನುವಾರ, 18 ಜೂನ್ 2023 (11:03 IST)
Photo Courtesy: Instagram
ಮುಂಬೈ: ಇಂದು ಅಪ್ಪಂದಿರ ದಿನ. ಈ ದಿನಕ್ಕೆ ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ತಂದೆಗೆ ವಿಶ್ ಮಾಡುತ್ತಿದ್ದಾರೆ.

ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳು ತಮ್ಮ ತಂದೆಯ ಜೊತೆ ಅಥವಾ ಮಕ್ಕಳ ಜೊತೆಗಿರುವ ಫೋಟೋ ಪ್ರಕಟಿಸಿ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಅಪ್ಪಂದಿರ ದಿನಕ್ಕೆ ಶುಭ ಕೋರಿದ್ದಾರೆ.

ಸದ್ಯಕ್ಕೆ ಕುಟುಂಬದ ಜೊತೆ ಪ್ರವಾಸದಲ್ಲಿರುವ ರೋಹಿತ್ ಮಗಳ ಜೊತೆಗಿರುವ ಸುಂದರ ಕ್ಷಣದ ಫೋಟೋ ಪ್ರಕಟಿಸಿ, ಇಂದು ಮಾತ್ರವಲ್ಲ, ಎಂದೆಂದಿಗೂ ಹ್ಯಾಪೀ ಅಪ್ಪ’ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ