ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ: ಪೋಷಕರ ತೀರ್ಮಾನವೇನು ಗೊತ್ತಾ
ಶ್ರೇಯಸ್ ಅಯ್ಯರ್ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೇಯಸ್ ಗೆ ಆಂತರಿಕ ರಕ್ತ ಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೀಗಾಗಿ ಸೋಂಕು ಬೇರೆ ಅವಯವಗಳಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅವರನ್ನು ಒಂದು ವಾರ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿದುಬಂದಿದೆ. ಇದರ ನಡುವೆ ಮಗನ ಆರೋಗ್ಯ ಸ್ಥಿತಿ ಪೋಷಕರ ಚಿಂತೆಗೆ ಕಾರಣವಾಗಿದೆ.
ಈ ಕಾರಣಕ್ಕೆ ತಕ್ಷಣವೇ ಆಸೀಸ್ ಗೆ ತೆರಳಲು ಶ್ರೇಯಸ್ ತಂದೆ-ತಾಯಿ ತುರ್ತು ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮಗನಿಗಾಗಿ ಅವರೂ ಸಿಡ್ನಿಗೆ ತೆರಳಲಿದ್ದಾರೆ. ಇನ್ನು, ಶ್ರೇಯಸ್ ಚೇತರಿಕೆಗೆ ಅಭಿಮಾನಿಗಳೂ ಪ್ರಾರ್ಥಿಸುತ್ತಿದ್ದಾರೆ.