ನಾಯಕನಾಗಿ ದಾಖಲೆ ಮಾಡಿದರೂ ರೋಹಿತ್ ಬ್ಯಾಟಿಗನಾಗಿ ವಿಫಲ
ನಿನ್ನೆ ಜಿಂಬಾಬ್ವೆ ವಿರುದ್ಧದ ಪಂದ್ಯ ರೋಹಿತ್ ಪಾಲಿಗೆ ನಾಯಕನಾಗಿ 50 ನೇ ಪಂದ್ಯವಾಗಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ನಾಯಕನಾಗಿ ರೋಹಿತ್ ಗೆದ್ದಿದ್ದಾರೆ.
ಆದರೆ ಬ್ಯಾಟಿಗನಾಗಿ ಹಳೆಯ ಹಿಟ್ ಮ್ಯಾನ್ ಮರೆಯಾಗಿದ್ದಾರೆ ಎನಿಸುತ್ತಿದೆ. ನಾಯಕತ್ವ ಜವಾಬ್ಧಾರಿ ಸಿಕ್ಕ ಮೇಲೆ ರೋಹಿತ್ ಬ್ಯಾಟ್ ಝಳಪಿಸಿ ಅದೆಷ್ಟೋ ಕಾಲವಾಯ್ತು. ನಿನ್ನೆಯ ಪಂದ್ಯದಲ್ಲೂ ಕೇವಲ 15 ರನ್ ಗಳಿಸಿ ಔಟಾದ ರೋಹಿತ್ ಮತ್ತೆ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ಟಿ20 ಫಾರ್ಮ್ಯಾಟ್ ನಲ್ಲಿ ರೋಹಿತ್ ರಂತಹ ಬಿಗ್ ಹಿಟ್ಟರ್ ಗಳು ಫಾರ್ಮ್ ಕಂಡುಕೊಳ್ಳುವುದು ಭಾರತಕ್ಕೆ ಮುಖ್ಯವಾಗಿದೆ. ರೋಹಿತ್ ಆ ಕೆಲಸವನ್ನು ಆದಷ್ಟು ಬೇಗ ಮಾಡಬೇಕಿದೆ.