ಹಿಟ್ ಮ್ಯಾನ್ ಅವತಾರ ತಾಳಿದ ರೋಹಿತ್: ಶತಕ ಕೈ ತಪ್ಪಿ ನಿರಾಸೆ

ಬುಧವಾರ, 27 ಸೆಪ್ಟಂಬರ್ 2023 (20:26 IST)
Photo Courtesy: Twitter
ರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಅವತಾರ ಪ್ರದರ್ಶಿಸಿದ್ದಾರೆ.

ರೋಹಿತ್ ಹೊಡೆಬಡಿಯ ಆಟಕ್ಕೆ ಹೆಸರು ವಾಸಿ. ಇಂದು ಅವರ ಇನಿಂಗ್ಸ್ ನೋಡಿದಾಗ ಹಳೆಯ ‘ಹಿಟ್ ಮ್ಯಾನ್’ ಖ್ಯಾತಿಯ ರೋಹಿತ್ ನೆನಪಾದರು. ಒಟ್ಟು 57 ಎಸೆತ ಎದುರಿಸಿದ ಅವರು 6 ಸಿಕ್ಸರ್ ಸಹಿತ 81 ರನ್ ಚಚ್ಚಿದರು. ಆದರೆ ದುರದೃಷ್ಟವಶಾತ್ ಗ್ಲೆನ್ ಮ್ಯಾಕ್ಸ್ ವೆಲ್ ಎಸೆತದಲ್ಲಿ ಕಾಟ್ ಆಂಡ್ ಬೌಲ್ಡ್ ಆಗಿ ನಿರ್ಗಮಿಸಬೇಕಾಯಿತು. ಇಂದು ಅವರು ಆಡುವ ಪರಿ ನೋಡಿ ಶತಕಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

ಇನ್ನೊಂದೆಡೆ ಕಿಂಗ್ ಕೊಹ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. ಆದರೆ ಅವರೂ 56 ರನ್ ಗಳಿಸಿದಾಗ ಮ್ಯಾಕ್ಸ್ ವೆಲ್ ಗೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ ನೀಡಿರುವ 353 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ಇಂದು ರೋಹಿತ್ ಜೊತೆಗೆ ಅಚ್ಚರಿಯೆಂಬಂತೆ ಆರಂಭಿಕರಾಗಿ ವಾಷಿಂಗ್ಟನ್ ಸುಂದರ್ ಕಣಕ್ಕಿಳಿದರು. ಆದರೆ ಸುಂದರ್ 30 ಎಸೆತ ಎದುರಿಸಿ ಕೇವಲ 18 ರನ್ ಗಳಿಸಿ ಔಟಾದರು. ಬಳಿಕ ಬಂದ ಕೊಹ್ಲಿ, ರೋಹಿತ್ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು. ಕೆಎಲ್ ರಾಹುಲ್ ಉತ್ತಮ ಲಯದಲ್ಲಿದ್ದಾಗಲೇ 26 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ 39 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಕ್ರೀಸ್ ನಲ್ಲಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ 36 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ