ಭಾರತ-ಆಸೀಸ್ ಏಕದಿನ: ರನ್ ಹೊಳೆ ಹರಿಸುತ್ತಿರುವ ಆಸೀಸ್, ಭಾರತೀಯ ಬೌಲರ್ ಗಳು ಸುಸ್ತು!

ಬುಧವಾರ, 27 ಸೆಪ್ಟಂಬರ್ 2023 (16:31 IST)
ರಾಜ್ ಕೋಟ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸೀಸ್ ಇತ್ತೀಚೆಗಿನ ವರದಿ ಬಂದಾಗ 41 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ.

ನಿರೀಕ್ಷೆಯಂತೇ ರಾಜ್ ಕೋಟ್ ಮೈದಾನ ಅಪ್ಪಟ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಆಸೀಸ್ ಬ್ಯಾಟಿಗರು ಭಾರತೀಯ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದಾರೆ. ಆರಂಭಿಕ ಡೇವಿಡ್ ವಾರ್ನರ್ 56, ಮಿಚೆಲ್ ಮಾರ್ಷ್‍ 96, ಸ್ಟೀವ್ ಸ್ಮಿತ್ 74 ರನ್ ಗಳಿಸಿದರು.

ಭಾರತೀಯ ಬೌಲರ್ ಗಳು ಇದೀಗಷ್ಟೇ ನಿಯಮಿತವಾಗಿ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಸ್ಕೋರ್ ಈಗಾಗಲೇ 300 ರ ಗಡಿ ತಲುಪಿದ್ದು, 50 ಓವರ್ ಆಗುವಷ್ಟರಲ್ಲಿ 400 ರ ಗಡಿ ತಲುಪಿದರೂ ಅಚ್ಚರಿಯಿಲ್ಲ. ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ 2 ವಿಕೆಟ್ ಕಬಳಿಸಿದರೂ ತಮ್ಮ 7 ಓವರ್ ಗಳ ಕೋಟಾದಲ್ಲಿ 62 ರನ್ ನೀಡಿದ್ದಾರೆ! ಉಳಿದೆಲ್ಲಾ ಬೌಲರ್ ಗಳದ್ದೂ ಇದೇ ಕತೆ. ಇದ್ದವರಲ್ಲಿ ವಾಷಿಂಗ್ಟನ್ ಸುಂದರ್ 10 ಓವರ್ ಗಳ ಕೋಟಾದಲ್ಲಿ 48 ನೀಡಿದರೂ ವಿಕೆಟ್ ಕೀಳಲು ವಿಫಲರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ