ವಿರಾಟ್ ಕೊಹ್ಲಿಯ ಫಿಟ್ ನೆಸ್ ಹುಚ್ಚಿನ ಬಗ್ಗೆ ಸಹ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?
ಗುರುವಾರ, 17 ಮೇ 2018 (09:15 IST)
ಬೆಂಗಳೂರು: ಜಾಗತಿಕ ಕ್ರಿಕೆಟ್ ನಲ್ಲಿ ಫಿಟ್ಟೆಸ್ಟ್ ಕ್ರಿಕೆಟರ್ ಯಾರು ಎಂದರೆ ವಿರಾಟ್ ಕೊಹ್ಲಿ ಹೆಸರು ಮುಂಚೂಣಿಯಲ್ಲಿರುತ್ತದೆ. ಅಂತಿಪ್ಪ ಕೊಹ್ಲಿ ಫಿಟ್ ನೆಸ್ ಉಳಿಸಿಕೊಳ್ಳಲು ಎಷ್ಟು ಕಷ್ಟಪಡುತ್ತಾರೆ ಗೊತ್ತಾ?
ಫಿಟ್ ನೆಸ್, ಟ್ರೈನಿಂಗ್ ವಿಷಯದಲ್ಲಿ ಕೊಹ್ಲಿ ತುಂಬಾ ಕಟ್ಟುನಿಟ್ಟಿನ ಮನುಷ್ಯ. ಅವರ ಇಷ್ಟದ ಖಾದ್ಯಗಳನ್ನೂ ಮುಲಾಜಿಲ್ಲದೇ ಪಕ್ಕಕ್ಕೆ ಸರಿಸುವ ಗಟ್ಟಿಗ. ಹೀಗಿರುವ ಕೊಹ್ಲಿ ಪಂದ್ಯಕ್ಕೆ ತೆರಳುವ ಬಸ್ ಬರುವ ಅರ್ಧಗಂಟೆ ಮೊದಲು ಅಂತಿಮವಾಗಿ ಜಿಮ್ ನಲ್ಲಿ ಬೆವರು ಸುರಿಸಿಯೇ ಬಸ್ ಹತ್ತುತ್ತಾರಂತೆ! ಹಾಗಂತ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಸಹ ಆಟಗಾರ ಕ್ರಿಸ್ ವೋಕ್ ಹೇಳಿಕೊಂಡಿದ್ದಾರೆ.
ಕೊಹ್ಲಿ ಮಾದರಿಯಿಂದ ಟೀಂ ಇಂಡಿಯಾ ಕ್ರಿಕೆಟಿಗರೂ ಈಗ ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಲು ತೊಡಗಿದ್ದಾರೆ. ಇದೀಗ ಸರ್ರೆ ಪರ ಕೌಂಟಿ ಕ್ರಿಕೆಟ್ ಆಡಲಿರುವ ಕೊಹ್ಲಿ ಅಲ್ಲಿನ ಆಟಗಾರರಿಗೂ ಈ ವಿಚಾರದಲ್ಲಿ ಸ್ಪೂರ್ತಿಯಾಗುವುದು ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.