ಅಭ್ಯಾಸದ ವೇಳೆ ಗಾಯಗೊಂಡ ರೋಹಿತ್ ಶರ್ಮಾ: ಟೀಂ ಇಂಡಿಯಾಗೆ ಆಘಾತ

ಶನಿವಾರ, 2 ನವೆಂಬರ್ 2019 (08:40 IST)
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆ ಮೊದಲ ಟಿ20 ಪಂದ್ಯ ನಡೆಯಲಿದ್ದು, ಅಭ್ಯಾಸ ನಡೆಸುವಾಗ ಹಂಗಾಮಿ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ.


ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಕಾರಣ ರೋಹಿತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿರುವ ರೋಹಿತ್ ನಿನ್ನೆ ಅಭ್ಯಾಸ ನಡೆಸುವಾಗ ಕಾಲಿಗೆ ಬಾಲ್ ತಗುಲಿ ನೋವಿಗೆ ತುತ್ತಾದರು.

ತಕ್ಷಣವೇ ಬ್ಯಾಟಿಂಗ್ ಕೋಚ್ ಸಹಾಯದಿಂದ ಮೈದಾನದಿಂದ ಹೊರನಡೆದ ರೋಹಿತ್ ಬಳಿಕ ಅಭ್ಯಾಸಕ್ಕೆ ಮರಳಲಿಲ್ಲ. ಮೂಲಗಳ ಪ್ರಕಾರ ಅವರ ಗಾಯ ಗಂಭೀರವಾಗಿಲ್ಲ ಎನ್ನಲಾಗಿದೆ. ಹಾಗಿದ್ದರೂ ಕೆಲವು ಕಾಲ ರೋಹಿತ್ ಆತಂಕಕ್ಕೆ ಕಾರಣರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ