ಗಾಯದ ವೇಳೆ ಬೆರಳಿಗೆ ಗಾಯ ಮಾಡಿಕೊಂಡ ರೋಹಿತ್ ಶರ್ಮಾ

ಮಂಗಳವಾರ, 6 ಜೂನ್ 2023 (16:55 IST)
Photo Courtesy: Twitter
ದಿ ಓವಲ್: ವಿಶ‍್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಒಂದು ದಿನ ಬಾಕಿಯಿರುವಾಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯದ ಭೀತಿಗೊಳಗಾಗಿದ್ದಾರೆ.

ನೆಟ್ ಪ್ರ್ಯಾಕ್ಟೀಸ್ ಮಾಡುವಾಗ ರೋಹಿತ್ ಬೆರಳಿಗೆ ಗಾಯ ಮಾಡಿಕೊಂಡಿದ್ದು ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತಕ್ಷಣವೇ ಬ್ಯಾಂಡೇಜ್ ಸುತ್ತಿಕೊಂಡ ಅವರು ಕೆಲವು ಕಾಲವಷ್ಟೇ ಅಭ್ಯಾಸ ನಡೆಸಿದರು. ಬಳಿಕ ಅಭ್ಯಾಸ ಕೊನೆಗೊಳಿಸಿ ವಿಶ್ರಾಂತಿ ಪಡೆದಿದ್ದಾರೆ. ಅವರ ಗಾಯ ಗಂಭೀರವಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ