ಮತ್ತೆ ಟಾಸ್‌ ಸೋತ ರೋಹಿತ್ ಶರ್ಮಾ: ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ದೊಡ್ಡ ಆಘಾತ

Sampriya

ಭಾನುವಾರ, 9 ಮಾರ್ಚ್ 2025 (14:05 IST)
Photo Courtesy X
ದುಬೈ: ಇಲ್ಲಿನ ಕ್ರೀಡಾಂಗಣದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಮಿಚೆಲ್‌ ಸ್ಯಾಂಟನರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ರೋಹಿತ್‌ ಶರ್ಮಾ ಪಡೆ ಮೊದಲು ಫೀಲ್ಡಿಂಗ್‌ಗೆ ಇಳಿಯಲಿದೆ. ರೋಹಿತ್ ಶರ್ಮಾ ಸತತ 15 ಪಂದ್ಯಗಳಲ್ಲಿ ಟಾಸ್‌ ಸೋತಂತಾಗಿದೆ.

ಭಾರತ ತಂಡವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್‌ ಆಗುವ ಛಲದಲ್ಲಿದೆ. ಆದರೆ, ಹ್ಯಾಟ್ರಿಕ್‌ ಫೈನಲ್‌ ಪ್ರವೇಶ ಪಡೆದಿರುವ ಭಾರತ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಆಘಾತವಾಗಿದೆ. ಭಾರತ ವಿರುದ್ಧ ಕಳೆದ ಪಂದ್ಯದಲ್ಲಿ ಐದು ವಿಕೆಟ್‌ ಪಡೆದಿದ್ದ ಮ್ಯಾಟ್‌ ಹೆನ್ರಿ ಗಾಯಾಳಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಗುಂಪು ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ತಂಡವು ಕಿವೀಸ್‌ ತಂಡವನ್ನು ಮಣಿಸಿ ಅಜೇಯವಾಗಿ ಫೈನಲ್‌ ಪ್ರವೇಶ ಪಡೆದಿವೆ.

2000ರಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಮತ್ತೆ ಭಾರತವನ್ನು ಮಣಿಸಿ ಪ್ರಶಸ್ತಿ ಗೆಲ್ಲುವ ಛಲದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ