ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಮುನ್ನ ವಿರಾಟ್‌ ಕೊಹ್ಲಿ ಮಾಜಿ ಕೋಚ್‌ ಸ್ಫೋಟಕ ಹೇಳಿಕೆ

Sampriya

ಭಾನುವಾರ, 9 ಮಾರ್ಚ್ 2025 (13:17 IST)
Photo Courtesy X
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಇಂದು ದುಬೈನಲ್ಲಿ ನಡೆಯುತ್ತಿದ್ದು, ಮುಖಾಮುಖಿಗೆ ಭಾರತ ಮತ್ತು ನ್ಯೂಜಿಲೆಂಡ್‌ ಪಡೆ ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿಅವರ ಮಾಜಿ ಕೋಚ್‌ ರಾಜ್ ಕುಮಾರ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ಹಣಾಹಣಿಯು ಎರಡು ತಂಡಗಳ ನಡುವೆ ಕಠಿಣ ಸ್ಪರ್ಧೆ ಇರುತ್ತದೆ. ಟೂರ್ನಿಯಲ್ಲಿ ಭಾರತ ಇಲ್ಲಿಯವರೆಗೆ ಅಜೇಯವಾಗಿದೆ. ಮಿಚೆಲ್ ಸ್ಯಾಂಟ್ನರ್ ನಾಯಕತ್ವದಲ್ಲಿ ಕಿವೀಸ್ ಪಡೆಯು ಬ್ಯಾಟ್ ಮತ್ತು ಬಾಲ್‌ನಲ್ಲಿ ಬಲಿಷ್ಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಎರಡು ತಂಡಗಳು 2000ರ ಫೈನಲ್‌ನಲ್ಲೂ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವು ಗೆದ್ದು ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಇದೀಗ 25 ವರ್ಷಗಳ ಬಳಿಕ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.

ಮತ್ತೊಂದೆಡೆ 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಮತ್ತು 2021 ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಭಾರತ ಸೋತಿದೆ. ಆ ಸೋಲಿಗೆ ಮುಯ್ಯಿ ತೀರಿಸಲು ಭಾರತ ಎದುರು ನೋಡುತ್ತಿದೆ.

ಎರಡು ಉತ್ತಮ ತಂಡಗಳು ಫೈನಲ್ ತಲುಪಿವೆ. ಇದು ಕಠಿಣ ಸ್ಪರ್ಧೆಯಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಎರಡೂ ತಂಡಗಳು ಉತ್ತಮ ಕ್ರಿಕೆಟ್ ಆಡುತ್ತಿವೆ. ಈಗ ತಾಪಮಾನ ಹೆಚ್ಚಿರುವುದರಿಂದ, ಪಿಚ್ ಒಣಗಿರುತ್ತದೆ. ಸ್ಪಿನ್ನರ್‌ಗಳಿಗೆ ಅನುಕೂಲವಾಗುತ್ತದೆ ಎಂದು ರಾಜ್ ಕುಮಾರ್ ಶರ್ಮಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ