ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಇದೀಗ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಆದರೆ ರೋಹಿತ್ ಗೆ ಮಗುವಾಗಿರುವುದರಿಂದ ಅದೃಷ್ಟ ಖುಲಾಯಿಸಿರುವುದು ಮಾತ್ರ ಕೆಎಲ್ ರಾಹುಲ್ ಗೆ! ಅದು ಹೇಗೆ ಅಂತೀರಾ?
ರೋಹಿತ್ ಶರ್ಮಾ ತಮ್ಮ ಪತ್ನಿ ಮತ್ತು ಮಗಳೊಂದಿಗೆ ಇರಲು ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದು ತವರಿಗೆ ಮರಳಿದ್ದಾರೆ. ಹೀಗಾಗಿ ತಂಡದಲ್ಲಿ ಒಬ್ಬ ಬ್ಯಾಟ್ಸ್ ಮನ್ ಸ್ಥಾನ ಬಾಕಿಯಿದ್ದು, ಆ ಸ್ಥಾನ ಇದೀಗ ಕೆಎಲ್ ರಾಹುಲ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಕಳಪೆ ಫಾರ್ಮ್ ನಿಂದಾಗಿ ಕಳೆದ ಪಂದ್ಯದಲ್ಲಿ ರಾಹುಲ್ ತಂಡದಿಂದ ಕೊಕ್ ಪಡೆದಿದ್ದರು. ಆ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ಆರಂಭಿಕರಾಗಿ ಹನುಮ ವಿಹಾರಿ ಕಣಕ್ಕಿಳಿದಿದ್ದರೂ ಯಶಸ್ಸು ಸಾಧಿಸಿರಲಿಲ್ಲ. ಹೀಗಾಗಿ ರೋಹಿತ್ ರಿಂದ ತೆರವಾದ ಸ್ಥಾನಕ್ಕೆ ಹನುಮ ವಿಹಾರಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರೆ ಆರಂಭಿಕ ಸ್ಥಾನ ರಾಹುಲ್ ಪಾಲಾಗುವುದು ನಿಶ್ಚಿತ. ಇದರಿಂದಾಗಿ ತಮ್ಮ ಬೆಸ್ಟ್ ಫ್ರೆಂಡ್ ಮಯಾಂಕ್ ಜತೆಗೆ ಟೀಂ ಇಂಡಿಯಾಗೆ ಆರಂಭಿಕನಾಗುವ ಅದೃಷ್ಟ ರಾಹುಲ್ ಗೆ ಒಲಿದುಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ