ನಾಲ್ಕನೇ ಟೆಸ್ಟ್ ಆಡದೇ ರೋಹಿತ್ ಶರ್ಮಾ ದಿಡೀರ್ ಆಗಿ ಭಾರತಕ್ಕೆ ಮರಳುತ್ತಿರುವುದೇಕೆ ಗೊತ್ತಾ?!
ಈ ಬಗ್ಗೆ ಟೀಂ ಇಂಡಿಯಾ ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ ರೋಹಿತ್ ಹೆರಿಗೆ ವೇಳೆ ಪತ್ನಿ ಜತೆಗಿರಲು ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಈ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಪತ್ನಿಯ ಬರ್ತ್ ಡೇಗೆ ಇದೇ ಮೊದಲ ಬಾರಿಗೆ ಬರ್ತ್ ಡೇ ದಿನ ನಿನ್ನ ಜತೆಗಿಲ್ಲ ಎಂದು ರೋಹಿತ್ ಸಂದೇಶ ಬರೆದುಕೊಂಡಿದ್ದರು. ಪ್ರತೀ ಬಾರಿ ಪತಿಯೊಂದಿಗೆ ವಿದೇಶ ಪ್ರವಾಸಗಳಲ್ಲಿ ಜತೆಯಾಗುವ ರಿತಿಕಾ ಈ ಬಾರಿ ತುಂಬು ಗರ್ಭಿಣಿಯಾಗಿದ್ದರಿಂದ ಆಸ್ಟ್ರೇಲಿಯಾಕ್ಕೆ ತೆರಳಿಲ್ಲ ಎನ್ನಲಾಗಿದೆ.