ಮಯಾಂಕ್ ಅಗರ್ವಾಲ್ ಸಹಾಯಕ್ಕೆ ಬಂದ ವಿರಾಟ್ ಕೊಹ್ಲಿ

ಸೋಮವಾರ, 31 ಡಿಸೆಂಬರ್ 2018 (10:10 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಯಾಂಕ್ ಅಗರ್ವಾಲ್ ರ ದೇಶೀಯ ದಾಖಲೆಯನ್ನು ಟೀಕಿಸಿದವರಿಗೆ ವಿರಾಟ್ ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ.


ಮಯಾಂಕ್ ರಣಜಿ ದಾಖಲೆಯನ್ನು ಆಸೀಸ್ ಕಮೆಂಟೇಟರ್ ಓ ಕೀಫ್ ಹೋಟೆಲ್ ವೈಟರ್ ವಿರುದ್ಧ ತ್ರಿಶತಕ ದಾಖಲೆ ಮಾಡಿರಬೇಕು ಎಂದು ಕುಹಕವಾಡಿದ್ದರು. ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಮೆಂಟೇಟರ್ ಕ್ಷಮೆ ಯಾಚಿಸಿದ್ದರು.

ಇದೀಗ ಕೊಹ್ಲಿ ಮಯಾಂಕ್ ರನ್ನು ಟೀಕಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ನಮ್ಮ ದೇಶೀಯ ಕ್ರಿಕೆಟ್ ಅತ್ಯದ್ಭುತವಾಗಿದೆ. ದೇಶೀಯ ಕ್ರಿಕೆಟ್ ನಲ್ಲಿ ಗಮನ ಸೆಳೆದ ಕ್ರಿಕೆಟ್ ನಿಂದಾಗಿಯೇ ಈ ಗೆಲುವು ಸಾಧ್ಯವಾಗಿದೆ ಎಂದು ಮಯಾಂಕ್ ಕುರಿತಾಗಿ ಟೀಕೆ ಮಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ