ಕಳಪೆ ಫಾರ್ಮ್ ನಲ್ಲಿದ್ದರೂ ಸೂರ್ಯಕುಮಾರ್ ಗೆ ಇನ್ನೊಂದು ಚಾನ್ಸ್?

ಸೋಮವಾರ, 20 ಮಾರ್ಚ್ 2023 (10:00 IST)
Photo Courtesy: Twitter
ಮುಂಬೈ: ರನ್ ಬರಗಾಲ ಎದುರಿಸುತ್ತಿರುವ ಟೀಂ ಇಂಡಿಯಾ ಮಧ‍್ಯಮ ಕ್ರಮಾಂಕದ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಸಾಕಷ್ಟು ಟೀಕೆಗೊಳಗಾಗಿದ್ದಾರೆ.

ಹೀಗಾಗಿ ಸೂರ್ಯರನ್ನು ಮುಂದಿನ ಪಂದ್ಯದಿಂದ ಡ್ರಾಪ್ ಮಾಡಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಇದೇ ಪ್ರಶ್ನೆಯನ್ನು ನಾಯಕ ರೋಹಿತ್ ಶರ್ಮಾ ಮುಂದಿಟ್ಟಾಗ ಅವರು ಪ್ರತಿಕ್ರಿಯಿಸಿದ್ದು ಹೀಗೆ.

‘ಶ್ರೇಯಸ್ ಯಾವಾಗ ವಾಪಸಾಗುತ್ತಾರೆ ಎಂದು ನಮಗೆ ಗೊತ್ತಿಲ್ಲ. ಸದ್ಯಕ್ಕೆ ಆ ಸ್ಥಾನ ಖಾಲಿಯಿದೆ, ಅಲ್ಲಿ ಸೂರ್ಯ ಆಡುತ್ತಿದ್ದಾರೆ. ಸೂರ್ಯ ತಮ್ಮ ಸಾಮರ್ಥ್ಯವೇನೆಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ಸಿಗಲಿದೆ. ಸೂರ್ಯಗೆ ತಾನು ಕೊಂಚ ರನ್ ಗಳಿಸಬೇಕು ಎಂದು ಮನದಟ್ಟಾಗಿದೆ. ಸಾಮರ್ಥ್ಯವಿರುವವರಿಗೆ ಮತ್ತಷ್ಟು ಅವಕಾಶ ನೀಡಬೇಕು’ ಎಂದಿದ್ದಾರೆ. ಹೀಗಾಗಿ ಸೂರ್ಯಗೆ ಮತ್ತೊಂದು ಚಾನ್ಸ್ ಸಿಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ