ನಿವೃತ್ತಿ ದಿನ ಯಾವಾಗ ಎಂದು ಘೋಷಿಸಿದ ರೋಹಿತ್ ಶರ್ಮಾ

Krishnaveni K

ಭಾನುವಾರ, 10 ಮಾರ್ಚ್ 2024 (11:15 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ನಿವೃತ್ತಿ ಬಗೆಗಿನ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಸೋತಿದ್ದ ಭಾರತ ಬಳಿಕ ನಾಲ್ಕೂ ಪಂದ್ಯಗಳನ್ನು ಸತತವಾಗಿ ಗೆದ್ದುಕೊಂಡು ಭರ್ಜರಿ ಸರಣಿ ಗೆಲುವು ತನ್ನದಾಗಿಸಿಕೊಂಡಿತ್ತು. ಹಿರಿಯ ಆಟಗಾರರಾದ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯುವ ಬ್ಯಾಟಿಗರನ್ನು ಕಟ್ಟಿಕೊಂಡು ರೋಹಿತ್ ಸರಣಿ ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಈ ಸರಣಿಯಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲ, ಬ್ಯಾಟಿಗನಾಗಿಯೂ ರೋಹಿತ್ ಮಿಂಚಿದ್ದಾರೆ. ಒಟ್ಟು ಎರಡು ಶತಕ ಸಿಡಿಸಿದ್ದಾರೆ. ಅದೂ ತಂಡಕ್ಕೆ ಅಗತ್ಯವಿದ್ದಾಗ ನಿಂತು ಆಡಿದ್ದಾರೆ. ಹೀಗಾಗಿ ರೋಹಿತ್ ಬ್ಯಾಟಿಂಗ್ ಬಗ್ಗೆಯೂ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಸರಣಿ ಮುಗಿದ ಬಳಿಕ ನೀಡಿದ ಸಂದರ್ಶನದಲ್ಲಿ ತಮ್ಮ ನಿವೃತ್ತಿ ಯಾವಾಗ ಎಂದೂ ರೋಹಿತ್ ಹೇಳಿದ್ದಾರೆ. ನನಗೆ ಯಾವಾಗ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎನಿಸುತ್ತದೋ ಆ ದಿನ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತೇನೆ. ಆದರೆ ಕಳೆದ 2-3 ವರ್ಷಗಳಲ್ಲಿ ನನ್ನ ಆಟ ಇನ್ನಷ್ಟೇ ಸುಧಾರಿಸಿದೆ ಎಂದೇ ಭಾವಿಸಿದ್ದೇನೆ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ನಿವೃತ್ತಿ ಯೋಚನೆಯಿಲ್ಲ ಎಂದು ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ