ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ 4-1 ರಿಂದ ಟೆಸ್ಟ್ ಸರಣಿ ಗೆದ್ದ ಬಳಿಕ ಕೋಚ್ ರಾಹುಲ್ ದ್ರಾವಿಡ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದಾರೆ. ರೋಹಿತ್ ಟೀಂ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಎಂದಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ನೀರವ ಮೌನವಿತ್ತು. ಆದರೆ ಆಗ ತಂಡವನ್ನು ರಿಲ್ಯಾಕ್ಸ್ ಮಾಡಿದ್ದು, ಸಹಜ ಸ್ಥಿತಿಗೆ ತಂಬ ಕ್ರೆಡಿಟ್ ರೋಹಿತ್ ಗೆ ಸಲ್ಲಬೇಕು. ಅವರ ಸ್ಪೂರ್ತಿಯಿಂದಲೇ ಯುವ ಆಟಗಾರರು ಸರಣಿಯಲ್ಲಿ ಸೋಲಿನಿಂದ ಮೇಲೇಳಲು ಸಹಾಯ ಮಾಡಿತು. ನಾನು ನೋಡಿದ ಹಾಗೆ ರೋಹಿತ್ ಬೆಸ್ಟ್ ಕ್ಯಾಪ್ಟನ್. ಯಾವತ್ತೂ ತಾಳ್ಮೆಯಿಂದ ವರ್ತಿಸುತ್ತಾರೆ ಎಂದು ದ್ರಾವಿಡ್ ಹೊಗಳಿದ್ದಾರೆ.
ಇನ್ನು, ಮೊದಲ ಟೆಸ್ಟ್ ಸೋಲಿನ ಬಳಿಕ ತಂಡಕ್ಕೆ ಯಾರಾದರೂ ಒಬ್ಬರು ಬಿಗ್ ಸ್ಕೋರ್ ಮೂಲಕ ಚೇತರಿಕೆ ನೀಡಬೇಕಿತ್ತು. ಆಗ ರೋಹಿತ್ ತಾವೇ ಮುಂದೆ ನಿಂತು ಜವಾಬ್ಧಾರಿಯುತವಾಗಿ ಅಡಿ ಶತಕ ಗಳಿಸಿದರು. ರೋಹಿತ್ ನಾನು ನೋಡಿದಂತೆ ಬಿಗ್ ಸಿಕ್ಸ್ ಹಿಟ್ಟರ್. ಅವರಂತೆ ಸುಲಭವಾಗಿ ಸಿಕ್ಸರ್ ಗಳನ್ನು ಸಿಡಿಸುವ ಆಟಗಾರರನ್ನು ನಾನು ನೋಡಿಯೇ ಇಲ್ಲ ಎಂದು ದ್ರಾವಿಡ್ ಹೊಗಳಿದ್ದಾರೆ.
ಈ ಸರಣಿಯಲ್ಲಿ ಕೆಎಲ್ ರಾಹುಲ್, ವಿರಾಟ್ ಕೊಹ್ಲಿಯಂತಹ ಅನುಭವಿಗಳ ಅನುಪಸ್ಥಿತಿಯಲ್ಲೂ ಯುವ ಬ್ಯಾಟಿಗರನ್ನು ಕಟ್ಟಿಕೊಂಡು ಇಂಗ್ಲೆಂಡ್ ವಿರುದ್ಧ ಸತತ ನಾಲ್ಕು ಟೆಸ್ಟ್ ಪಂದ್ಯ ಗೆಲುವಿಗೆ ಕಾರಣವಾಗಿದ್ದು ರೋಹಿತ್ ಶರ್ಮಾ ನಾಯಕತ್ವ. ಇದಕ್ಕಾಗಿ ಫ್ಯಾನ್ಸ್ ಅವರನ್ನು ಕೊಂಡಾಡುತ್ತಿದ್ದಾರೆ.