ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯಲಿಲ್ಲ. ಅವರ ಬದಲಿಗೆ ಉಪನಾಯಕ ಜಸ್ಪ್ರೀತ್ ಬುಮ್ರಾ ತಂಡ ಮುನ್ನಡೆಸಿದರು.
ರೋಹಿತ್ ಶರ್ಮಾ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದರು. ನಿನ್ನೆ ಭೋಜನ ವಿರಾಮದ ಬಳಿಕ ಔಟಾದ ಅವರು ಪೆವಿಲಿಯನ್ ಸೇರಿಕೊಂಡರು. ಆದರೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ವೇಳೆ ರೋಹಿತ್ ಪೆವಿಲಿಯನ್ ನಲ್ಲೇ ಉಳಿದುಕೊಂಡರು. ಅವರ ಬದಲು ಬುಮ್ರಾ ನಾಯಕತ್ವದ ಹೊಣೆ ಹೊತ್ತುಕೊಂಡರು.
ರೋಹಿತ್ ಶರ್ಮಾಗೆ ಕೊಂಚ ಬೆನ್ನು ನೋವು ಕಾಣಿಸಿಕೊಂಡಿದ್ದು ಈ ಕಾರಣಕ್ಕೆ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಬರಲಿಲ್ಲ. ಸುದೀರ್ಘ ಸಮಯದವರೆಗೆ ಬ್ಯಾಟ್ ಮಾಡಿದ್ದ ರೋಹಿತ್ ಬಳಲಿದ್ದರು. ಹೀಗಾಗಿ ಫೀಲ್ಡಿಂಗ್ ಮಾಡುತ್ತಿಲ್ಲ. ಆದರೆ ಅವರ ಗಾಯದ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ.
ಆದರೆ ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಲಿಲ್ಲ. ಭಾರತೀಯ ಬೌಲರ್ ಗಳು ಟೀಂ ಇಂಡಿಯಾ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು. ಆದರೆ ರೋಹಿತ್ ಅನುಪಸ್ಥಿತಿಯಲ್ಲಿ ಬುಮ್ರಾ ಎರಡು ರಿವ್ಯೂಗಳನ್ನು ತೆಗೆದುಕೊಂಡು ವ್ಯರ್ಥ ಮಾಡಿದ್ದು ಟೀಕೆಗೊಳಗಾಯಿತು.