ನೀವೇ ತಾನೇ ಕೊಹ್ಲಿಯನ್ನು ದಿಗ್ಗಜ ಅಂದೋರು ಎಂದು ನಕ್ಕ ರೋಹಿತ್ ಶರ್ಮಾ

Krishnaveni K

ಮಂಗಳವಾರ, 24 ಡಿಸೆಂಬರ್ 2024 (11:44 IST)
ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
 

ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಪದೇ ಪದೇ ಮಾಡಿದ ತಪ್ಪನ್ನೇ ಮಾಡಿ ಔಟ್ ಆಗುತ್ತಿದ್ದಾರೆ. ಆಫ್ ಸ್ಟಂಪ್ ಆಚೆ ಹೋಗುವ ಚೆಂಡನ್ನು ಕೆಣಕಲು ಹೋಗಿ ಔಟಾಗುತ್ತಿದ್ದಾರೆ. ಈ ಬಗ್ಗೆ ರೋಹಿತ್ ಗೆ ಪ್ರಶ್ನೆ ಮಾಡಲಾಗಿದೆ.

‘ಕೊಹ್ಲಿ ಆಪ್ ಸ್ಟಂಪ್ ಸಮಸ್ಯೆನಾ.. ನೀವೇ ಹೇಳ್ತೀರಿ ಕೊಹ್ಲಿ ಆಧುನಿಕ ಜಗತ್ತಿನ ಶ್ರೇಷ್ಠ ಕ್ರಿಕೆಟಿಗ ಅಂತ. ಹಾಗಿದ್ದ ಮೇಲೆ ಶ್ರೇಷ್ಠ ಕ್ರಿಕೆಟಿಗನಿಗೆ ತನಗೆ ಯಾವುದು ಸರಿ ಎಂದೂ ಗೊತ್ತಿರುತ್ತದೆ’ ಎಂದು ರೋಹಿತ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಕೊಹ್ಲಿ ಫಾರ್ಮ್ ತಮಗೆ ಚಿಂತೆಯಲ್ಲ ಎಂದಿದ್ದಾರೆ.

ಇನ್ನು, ಅಭ್ಯಾಸದ ವೇಳೆ ರೋಹಿತ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಅದೂ ಕೂಡಾ ಸಮಸ್ಯೆಯೇನಲ್ಲ. ನಾಲ್ಕನೇ ಪಂದ್ಯದಲ್ಲಿ ಆಡುತ್ತಿರುವುದಾಗಿ ರೋಹಿತ್ ಹೇಳಿದ್ದಾರೆ. ಆದರೆ ಯಾವ ಕ್ರಮಾಂಕ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ತಂಡಕ್ಕೆ ಯಾವುದು ಉತ್ತಮವೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ