ಕಳಪೆ ಪಿಚ್ ಕೊಟ್ಟು ರೋಹಿತ್ ಶರ್ಮಾಗೆ ಗಾಯ ಮಾಡಿದ್ರಾ, ಅರೋಪಕ್ಕೆ ಆಸ್ಟ್ರೇಲಿಯಾ ಉತ್ತರ

Krishnaveni K

ಸೋಮವಾರ, 23 ಡಿಸೆಂಬರ್ 2024 (15:27 IST)
ಮೆಲ್ಬೊರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕಳಪೆ ಪಿಚ್ ಕೊಟ್ಟು ಆಟಗಾರರು ಗಾಯಗೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪಕ್ಕೆ ಈಗ ಕ್ಯುರೇಟರ್ ಉತ್ತರ ಕೊಟ್ಟಿದ್ದಾರೆ.
 

ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಮೆಲ್ಬೊರ್ನ್ ನಲ್ಲಿ ಅಭ್ಯಾಸ ನಡೆಸುತ್ತಿದೆ. ಎರಡೂ ತಂಡದ ಅಭ್ಯಾಸಕ್ಕೆ ನೀಡಲಾಗಿರುವ ಪಿಚ್ ಬಗ್ಗೆ ಅಪಸ್ವರ ಕೇಳಿಬಂದಿದೆ. ಭಾರತ ತಂಡಕ್ಕೆ ಕಳಪೆ ಗುಣಮಟ್ಟದ ಪಿಚ್ ನೀಡಲಾಗಿದೆ ಎಂಬ ಆರೋಪ ಬಂದಿತ್ತು. ಇದೇ ಕಾರಣಕ್ಕೆ ನಿನ್ನೆ ರೋಹಿತ್ ಶರ್ಮಾ ಮತ್ತು ಆಕಾಶ್ ದೀಪ್ ಗಾಯಗೊಂಡಿದ್ದರು ಎನ್ನಲಾಗಿತ್ತು.

ಇದೀಗ ಆರೋಪಗಳಿಗೆ ಕ್ಯುರೇಟರ್ ಸ್ಪಷ್ಟನೆ ನೀಡಿದ್ದಾರೆ. ಈ ಪಿಚ್ ನಲ್ಲಿ ಆಡುವುದಾಗಿ ಭಾರತವೇ ಆಯ್ಕೆ ಮಾಡಿಕೊಂಡಿತ್ತು. ಸಾಮಾನ್ಯವಾಗಿ ನಾವು ಫ್ರೆಶ್ ಪಿಚ್ ಗಳನ್ನು ಪಂದ್ಯದ ಮೂರು ದಿನಗಳ ಮೊದಲಷ್ಟೇ ನೀಡುತ್ತೇವೆ. ಅಭ್ಯಾಸಕ್ಕೆ ಮೊದಲು ಬಂದು ಪಿಚ್ ಆಯ್ಕೆ ಮಾಡಿರುವುದು ಭಾರತವೇ. ಮೊದಲೇ ಬಂದರೆ ಯಾವ ಪಿಚ್ ಲಭ್ಯವಿರುತ್ತದೋ ಅದರಲ್ಲಿ ಆಡಬೇಕಾಗುತ್ತದೆ ಎಂದು ಕ್ಯುರೇಟರ್ ಹೇಳಿದ್ದಾರೆ.

ಈ ಪಿಚ್ ನಲ್ಲಿ ಅಭ್ಯಾಸ ನಡೆಸುವಾಗ ಮೊದಲನೆಯವರಾಗಿ ಕೆಎಲ್ ರಾಹುಲ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ರೋಹಿತ್ ಶರ್ಮಾ, ಆಕಾಶ್ ದೀಪ್ ಕೂಡಾ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಬೇಕೆಂದೇ ಭಾರತೀಯ ಆಟಗಾರರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ