ವಿಶ್ವಕಪ್ ಸೋಲಿನ ಕಣ್ಣೀರಿಗೆ ಸೇಡು ತೀರಿಸಿಕೊಂಡ ರೋಹಿತ್ ಶರ್ಮಾ

ಗುರುವಾರ, 30 ಜನವರಿ 2020 (09:24 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದ ಸೂಪರ್ ಓವರ್ ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ದು ನೋಡಿದರೆ ಅವರನ್ನು ಹಿಟ್ ಮ್ಯಾನ್ ಎಂದು ಕರೆಯುವುದಕ್ಕೂ ಸಾರ್ಥಕವಾಯಿತು ಎನಿಸಬಹುದು.


ವಿಶ್ವಕಪ್ ಸೆಮಿಫೈನಲ್ ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಸೋತಾಗ ಪೆವಿಲಿಯನ್ ನಲ್ಲಿ ಕೂತು ಕಣ್ಣೀರು ಹಾಕಿದ್ದ ರೋಹಿತ್ ಇಂದು ಅದೇ ಕಿವೀಸ್ ನಾಡಿನಲ್ಲಿ ಟಿ20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಮೂಲಕ ಅಂದಿನ ಕಣ್ಣೀರಿಗೆ ಮುಯ್ಯಿ ತೀರಿಸಿಕೊಂಡರು. ಅತ್ತ ನ್ಯೂಜಿಲೆಂಡ್ ಗೆ ಮತ್ತೆ ಸೂಪರ್ ಓವರ್ ಎನ್ನುವುದು ನತದೃಷ್ಟ ವಿಚಾರವಾಗಿ ಉಳಿಯಿತು.

ಲೀಲಾಜಾಲವಾಗಿ ಸಿಕ್ಸರ್ ಎತ್ತುವ ಕಾರಣಕ್ಕೇ ಸೂಪರ್ ಓವರ್ ನಲ್ಲಿ ರೋಹಿತ್ ಕಣಕ್ಕಿಳಿದಿದ್ದರು. ಕೊನೆಯ ಎರಡು ಎಸೆತಗಳಲ್ಲಿ ಅವರು ಸಿಕ್ಸರ್ ಬಾರಿಸಿದ ರೀತಿ ಅವರು ತಮ್ಮನ್ನು ಹಿಟ್ ಮ್ಯಾನ್  ಕರೆಯುವುದನ್ನು ಸಮರ್ಥಿಸಿದಂತಾಯಿತು. ಒಂದು ವೇಳೆ ರೋಹಿತ್ ಗೆ ಈ ಗೆಲುವು ಕೊಡಿಸಲು ಸಾಧ್ಯವಾಗದೇ ಹೋಗಿದ್ದರೆ ಬಹುಶಃ ಅವರ ಇದುವರೆಗಿನ ಸಿಕ್ಸರ್ ದಾಖಲೆಗಳಿಗೂ ಬೆಲೆಯಿರುತ್ತಿಲ್ಲವೇನೋ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ