ಐಪಿಎಲ್ ಗೆ ಮೊದಲು ರೋಹಿತ್ ಶರ್ಮಾಗೆ ಅನಾರೋಗ್ಯ

ಶುಕ್ರವಾರ, 31 ಮಾರ್ಚ್ 2023 (09:19 IST)
ಮುಂಬೈ: ಐಪಿಎಲ್ 2023 ರ ನಾಯಕರ ಫೋಟೋ ಶೂಟ್ ಕಾರ್ಯಕ್ರಮಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗೈರಾಗಿದ್ದರು.

ಇದಕ್ಕೆ ಈಗ ನಿಜ ಕಾರಣ ಬಯಲಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಉಳಿದೆಲ್ಲಾ ನಾಯಕರು ಟ್ರೋಫಿ ಜೊತೆ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಇದಕ್ಕೆ ನೆಟ್ಟಿಗರು ರೋಹಿತ್ ಏಕಾಂಗಿಯಾಗಿ ಟ್ರೋಫಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ತಮಾಷೆ ಮಾಡಿದ್ದರು.

ಇದೀಗ ರೋಹಿತ್ ಗೈರಾಗುವುದಕ್ಕೆ ಕಾರಣ ಅವರ ಅನಾರೋಗ್ಯ ಎಂದು ತಿಳಿದುಬಂದಿದೆ. ಅನಾರೋಗ್ಯದಿಂದಾಗಿ ರೋಹಿತ್ ಗೆ ಅಹಮ್ಮದಾಬಾದ್ ವರೆಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ಆದರೆ ಏಪ್ರಿಲ್ 2 ರಂದು ನಡೆಯಲಿರುವ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಭಾಗಿಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ