ರೋಹಿತ್ ಶರ್ಮಾ ದಂಪತಿಗೆ ಎರಡನೇ ಮಗು ಜನನ: ಯಾವ ಮಗು ಇಲ್ಲಿದೆ ಡೀಟೈಲ್ಸ್

Krishnaveni K

ಶನಿವಾರ, 16 ನವೆಂಬರ್ 2024 (08:48 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ ದೇ ದಂಪತಿ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಯಾವ ಮಗು ಇಲ್ಲಿದೆ ಡೀಟೈಲ್ಸ್.

ರೋಹಿತ್ ಮತ್ತು ರಿತಿಕಾ ಈಗ ಗಂಡು ಮಗುವಿನ ಪೋಷಕರಾಗಿದ್ದಾರೆ. ಇದಕ್ಕೆ ಮೊದಲು ಅವರಿಗೆ ಹೆಣ್ಣು ಮಗುವಾಗಿತ್ತು. ರಿತಿಕಾ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಬಗ್ಗೆ ರೋಹಿತ್ ಶರ್ಮಾ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ.  ರೋಹಿತ್ ಮತ್ತು ರಿತಿಕಾಗೆ ಈಗಾಗಲೇ ಸಮೈರಾ ಎನ್ನುವ 6 ವರ್ಷದ ಮುದ್ದಾದ ಹೆಣ್ಣು ಮಗುವಿದ್ದಾಳೆ. ಈಗ ಗಂಡು ಮಗುವಾಗಿದ್ದು ಫ್ಯಾಮಿಲಿ ಕಂಪ್ಲೀಟ್ ಆಗಿದೆ. ರೋಹಿತ್ ಗೆ ಮಗುವಾಗಿದೆ ಎಂಬ ಸುದ್ದಿ ಬರುತ್ತಿದ್ದಂತೇ ಅಭಿಮಾನಿಗಳು ಜ್ಯೂ ಹಿಟ್ ಮ್ಯಾನ್ ಎಂದು ಶುಭ ಕೋರಿದ್ದಾರೆ.

ಪತ್ನಿಯ ಡೆಲಿವರಿ ಕಾರಣಕ್ಕೇ ರೋಹಿತ್ ಇದುವರೆಗೆ ತಂಡದ ಜೊತೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿರಲಿಲ್ಲ. ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವುದೂ ಅನುಮಾನವಿತ್ತು. ಇದೀಗ ಡೆಲಿವರಿಯಾಗಿರುವುದರಿಂದ ರೋಹಿತ್ ಮೊದಲ ಟೆಸ್ಟ್ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ