ಹಾಗಿದ್ದರೆ ರೋಹಿತ್ ಯಾವ ಕಾರಣಕ್ಕೆ ಗೈರಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಅದರ ಸುಳಿವು ದೊರೆತಿದೆ. ರೋಹಿತ್ ಮತ್ತು ರಿತಿಕಾ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದ್ದು, ಪತ್ನಿಯ ಹೆರಿಗೆ ನಿಮಿತ್ತ ರೋಹಿತ್ ಕ್ರಿಕೆಟ್ ನಿಂದ ಬಿಡುವು ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಯಾವುದೇ ಟೂರ್ನಿಯಲ್ಲೂ ರಿತಿಕಾ ಮೈದಾನದಲ್ಲಿ ಪತಿ ಆಡುವುದನ್ನು ನೋಡಲು ಬಂದಿಲ್ಲ. ಇದರ ಜೊತೆಗೆ ಈಗ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಏರಾನ್ ಫಿಂಚ್ ಕಾಮೆಂಟ್ ನಲ್ಲಿ ಅದು ಖಚಿತವಾಗಿದೆ. ಇತ್ತೀಚೆಗೆ ಸುನಿಲ್ ಗವಾಸ್ಕರ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಲಿದ್ದಾರೆ ಎಂದರೆ ಎಲ್ಲಾ ಪಂದ್ಯಗಳಿಗೂ ಹೊಸ ನಾಯಕನನ್ನೇ ಆಯ್ಕೆ ಮಾಡಬೇಕು ಎಂದಿದ್ದರು.
ಅವರ ಕಾಮೆಂಟ್ ಗೆ ತಿರುಗೇಟು ನೀಡಿದ್ದ ಏರಾನ್ ಫಿಂಚ್ ಸುನಿಲ್ ಹೇಳಿರುವುದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ನಿಮ್ಮ ಪತ್ನಿ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನುವಾಗ ಕುಟುಂಬದ ಜೊತೆಗಿರಬೇಕು ಎಂದರೆ ಅದು ಸುಂದರ ಕ್ಷಣ. ಅಂತಹ ಪರಿಸ್ಥಿತಿಯಲ್ಲಿ ನೀವು ಕುಟುಂಬಕ್ಕಾಗಿ ಸಮಯ ನೀಡಲೇಬೇಕಾಗುತ್ತದೆ ಎಂದು ಫಿಂಚ್ ಹೇಳಿದ್ದು, ಇದರಿಂದ ರೋಹಿತ್ ಮತ್ತೆ ತಂದೆಯಾಗುತ್ತಿರುವುದು ಕನ್ ಫರ್ಮ್ ಆಗಿದೆ.