ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವನ್ನು ಗೆಲ್ಲಲು ಆಫ್ರಿಕಾ 297 ರನ್ ಗಳ ಗುರಿ ನಿಗದಿಪಡಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು. ಟೀಂ ಇಂಡಿಯಾದಲ್ಲಿ 3 ವಿಕೆಟ್ ಗಳನ್ನು ಬೇಗನೇ ಕಿತ್ತು ಮೇಲುಗೈ ಸಾಧಿಸಿದರೂ, ಬಳಿಕ ನಾಲ್ಕನೇ ವಿಕೆಟ್ ಗೆ ಜೊತೆಯಾದ ಬವುಮಾ ಮತ್ತು ದುಸೆನ್ ಭರ್ಜರಿ ಜೊತೆಯಾಟದಿಂದ ಆಫ್ರಿಕಾ ದೊಡ್ಡ ಮೊತ್ತ ಪೇರಿಸಿತು.
ಈ ಜೋಡಿ ಬರೋಬ್ಬರಿ 150 ಪ್ಲಸ್ ರನ್ ಜೊತೆಯಾಟವಾಡಿ ಕಾಡಿದರು. ಬವುಮಾ 110 ರನ್ ಗಳಿಸಿ ಔಟಾದರೆ, ದುಸೆನ್ 129 ರನ್ ಗಳಿಸಿ ಕೊನೆಯವರೆಗೂ ಅಜೇಯವಾಗುಳಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 2, ರವಿಚಂದ್ರನ್ ಅಶ್ವಿನ್ 1 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದೊಂದು ವಿಕೆಟ್ ರನೌಟ್ ಆಗಿತ್ತು.