ದ.ಆಫ್ರಿಕಾ ತಂಡದಿಂದ ಮತ್ತೊಬ್ಬ ಔಟ್!

ಸೋಮವಾರ, 5 ಫೆಬ್ರವರಿ 2018 (16:21 IST)
ಸೆಂಚೂರಿಯನ್: ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಆಫ್ರಿಕಾ ತಂಡಕ್ಕೆ ಒಬ್ಬೊರಾದ ಮೇಲೆ ಒಬ್ಬರಂತೆ ಪ್ರಮುಖ ಆಟಗಾರರು ಗಾಯಾಳುಗಳ ಗೂಡು ಸೇರುತ್ತಿರುವುದು ಚಿಂತೆಗೆ ಕಾರಣವಾಗಿದೆ.
 

ನಾಯಕ ಫ್ಲಾ ಡು ಪ್ಲೆಸಿಸ್, ಎಬಿಡಿ ವಿಲಿಯರ್ಸ್ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಗಾಯಾಳುಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಇದೀಗ ಭಾರತದ ವಿರುದ್ಧದ ಉಳಿದ ಪಂದ್ಯಗಳಿಂದ ಔಟ್ ಆಗಿದ್ದಾರೆ.

ಮೊಣ ಕೈ ಗಾಯಕ್ಕೆ ತುತ್ತಾಗಿರುವ ಕ್ವಿಂಟನ್ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು ವಾರಗಳ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಟಿ20 ಪಂದ್ಯಗಳಿಗೂ ಕ್ವಿಂಟನ್ ಮರಳುವುದು ಅನುಮಾನವಾಗಿದೆ. ಕ್ವಿಂಟನ್ ಸ್ಥಾನದಲ್ಲಿ ಹೆನ್ರಿಚ್ ಕ್ಲಾಸನ್ ಗ್ಲೌಸ್ ತೊಡುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ