ರಾಹುಲ್ ದ್ರಾವಿಡ್ ನಂತರ ಅತ್ಯುತ್ತಮ ಕೋಚ್ ಆಗಬಲ್ಲ ಕ್ರಿಕೆಟಿಗ ಯಾರು ಗೊತ್ತಾ?
ಸೋಮವಾರ, 5 ಫೆಬ್ರವರಿ 2018 (08:34 IST)
ಬೆಂಗಳೂರು: ಭಾರತ ಎ ತಂಡದ ಕೋಚ್ ಆಗಿ ಭಾರೀ ಜನಮನ್ನಣೆ ಗಳಿಸುತ್ತಿರುವ ವಾಲ್ ರಾಹುಲ್ ದ್ರಾವಿಡ್ ನಂತರ ಭಾರತೀಯ ಕ್ರಿಕೆಟಿಗರ ಪೈಕಿ ಅತ್ಯುತ್ತಮ ಕೋಚ್ ಆಗುವ ಅರ್ಹತೆ ಯಾರಿಗಿದೆ ಗೊತ್ತಾ?
ಆ ಬಗ್ಗೆ ಒಂದು ವಿಶ್ಲೇಷಣೆ ಮಾಡೋಣ. ರಾಹುಲ್ ದ್ರಾವಿಡ್ ಆಡುವ ದಿನಗಳಿಂದಲೂ ಅವರ ತಾಳ್ಮೆ, ದೃಢತೆಗೆ ಹೆಸರುವಾಸಿ. ಅವರೊಂಥರಾ ಶಿಸ್ತಿನ ಸಿಪಾಯಿ, ಸ್ಥಿತ ಪ್ರಜ್ಞ. ತಮ್ಮ ಭಾವನೆಗಳನ್ನು ಹೊರಗಡೆ ತೋರ್ಪಸಿದ ವ್ಯಕ್ತಿ.
ಅದೇ ಥರಾ ಭಾರತ ಕ್ರಿಕೆಟಿಗರ ಪೈಕಿ ಇರುವ ಇನ್ನೊಬ್ಬ ಆಟಗಾರನೆಂದರೆ ಎಂಎಸ್ ಧೋನಿ. ಧೋನಿ ದ್ರಾವಿಡ್ ರ ಸಮಕ್ಕೆ ಬರಲಾರರೇನೋ. ಆದರೆ ಅವರ ತಾಳ್ಮೆ, ಶಾಂತ ಮನೋಭಾವ ದ್ರಾವಿಡ್ ರನ್ನೇ ಹೋಲುತ್ತದೆ. ಅಷ್ಟೇ ಅಲ್ಲದೆ, ಧೋನಿ ಮಾತನ್ನು, ಸಲಹೆಯನ್ನು ಯುವ ಕ್ರಿಕೆಟಿಗರು ತಪ್ಪದೇ ಪಾಲಿಸುತ್ತಾರೆ. ಟೀಂ ಇಂಡಿಯಾ ಈಗಲೂ ಧೋನಿ ನಾಯಕರಲ್ಲದಿದ್ದರೂ ಒತ್ತಡದ ಪರಿಸ್ಥಿತಿ ಬಂದಾಗ ನಾಯಕನ ಸಹಿತ ಎಲ್ಲರೂ ನೋಡುವುದು ಧೋನಿಯ ಕಡೆಗೆ.
ಹಾಗಾಗಿ ಭವಿಷ್ಯದಲ್ಲಿ ಕೋಚ್ ಸಾಲಿನಲ್ಲಿ ದ್ರಾವಿಡ್ ಸ್ಥಾನ ತುಂಬ ಬಲ್ಲ ಆಟಗಾರನೆಂದು ಯಾರಾದರೂ ಇದ್ದರೆ ಧೋನಿ ಮಾತ್ರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ