ದ.ಆಫ್ರಿಕಾದ ಕ್ರಿಕೆಟ್ ಆಟಗಾರ್ತಿ 160 ನಾಟೌಟ್, ಆದರೆ ಟೀಂ ಶೂನ್ಯಕ್ಕೆ ಆಲೌಟ್!

ಶುಕ್ರವಾರ, 16 ಡಿಸೆಂಬರ್ 2016 (13:48 IST)
ಕೇಪ್ ಟೌನ್: ಕ್ರಿಕೆಟ್ ಸಾಂಘಿಕ ಕ್ರೀಡೆ ಎಂದೇನೋ ಹೇಳುತ್ತಾರೆ. ಆದರೆ ದ.ಆಫ್ರಿಕಾ ಮಹಿಳಾ ತಂಡವೊಂದರ ಈ ಕತೆ ನೋಡಿದರೆ ಅದಕ್ಕೆ ತದ್ವಿರುದ್ಧ. ಅಲ್ಲಿ ನಡೆದ ದೇಶೀಯ ಪಂದ್ಯವೊಂದರಲ್ಲಿ ಕೇವಲ ಒಬ್ಬ ಆಟಗಾರ್ತಿ ಮಾತ್ರ 160 ರನ್ ಗಳಿಸಿದ್ದರೆ, ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ.

ಇದು ನಡೆದಿದ್ದು, ಎಂಪುಮಲಂಗಾ ಮತ್ತು ಈಸ್ಟರ್ನ್ಸ್ ತಂಡದ ನಡುವೆ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ. ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಶಾನಿಯಾ ಲೀ ಸ್ವಾರ್ಟ್ ಈ ಸಾಧನೆ ಮಾಡಿದ ಮಹಿಳೆ. ತನ್ನ ಜತೆಗಾತಿ ಆಟಗಾರ್ತಿಯರು ಒಬ್ಬರಾದ ಮೇಲೆ ಒಬ್ಬರೆಂಬಂತೆ ಪೆವಿಲಿಯನ್ ಗೆ ಪೆರೇಡ್ ನಡೆಸುತ್ತಿದ್ದರೆ, ಸ್ವಾರ್ಟ್ ಮಾತ್ರ 86 ಬಾಲ್ ಗಳಲ್ಲಿ 18 ಬೌಂಡರಿ ಮತ್ತು 12 ಸಿಕ್ಸರ್ ಗಳ ನೆರವಿನಿಂದ ಅಜೇಯವಾಗಿ ಉಳಿದರು.

ಇವರ ಆಟ ಕ್ರಿಸ್ ಗೇಲ್ ಆಟವನ್ನು ನೆನಪಿಸುವಂತಿತ್ತು. ಇಂತಹ ವಿಶಿಷ್ಟ ದಾಖಲೆ  ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಬಹುಶಃ ಆಗದು. ಅಂತಹದ್ದೊಂದು ವಿಶಿಷ್ಟ ಪಂದ್ಯಕ್ಕೆ ದ.ಆಫ್ರಿಕಾ ಸಾಕ್ಷಿಯಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ