ನಾವು ಏನು ಮಾಡಬೇಕೆಂದು ಹೊರಗಿನವರು ಹೇಳಬೇಕಾಗಿಲ್ಲ! ಸಚಿನ್ ತೆಂಡುಲ್ಕರ್ ಗೆ ಇಷ್ಟೊಂದು ಕೋಪ ಬಂದಿದ್ದು ಏಕೆ?!
ಗುರುವಾರ, 5 ಏಪ್ರಿಲ್ 2018 (12:38 IST)
ಮುಂಬೈ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಡಿರುವ ಟ್ವೀಟ್ ಇದೀಗ ಭಾರತೀಯ ಕ್ರಿಕೆಟಿಗರನ್ನು ಕೆರಳಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ನಂತರ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ರಕ್ತಪಾತವಾಗುತ್ತಿದೆ. ಯಾಕೆ ವಿಶ್ವಸಂಸ್ಥೆ ಅಮಾಯಕರ ಪ್ರಾಣ ಹೋಗುತ್ತಿದ್ದರೂ ಸುಮ್ಮನಿದೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದರು. ಇದಕ್ಕೆ ಕೊಹ್ಲಿ ತಲೆ ಬುಡವಿಲ್ಲದೇ ಮಾತನಾಡಬೇಡಿ ಎಂದು ಹುಕುಂ ಹೊರಡಿಸಿದ್ದರು.
ಇದೀಗ ಸಿಟ್ಟಿಗೆದ್ದಿರುವ ಸಚಿನ್ ‘ನಾವು ಏನು ಮಾಡಬೇಕೆಂದು ಹೊರಗಿನವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದಿದ್ದಾರೆ. ‘ ನಮ್ಮ ದೇಶವನ್ನು ಆಳಲು ನಮ್ಮಲ್ಲಿ ಸಮರ್ಥರಿದ್ದಾರೆ. ಅದಕ್ಕೆ ಹೊರಗಿನವರ ಅಗತ್ಯವಿಲ್ಲ’ ಎಂದು ಸಚಿನ್ ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಸುರೇಶ್ ರೈನಾ, ಕಪಿಲ್ ದೇವ್ ಮುಂತಾದ ಕ್ರಿಕೆಟಿಗರೂ ಅಫ್ರಿದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ