ಬೇರೆ ಸಂಸದರಿಗೆ ಹೋಲಿಸಿದರೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರೇ ಗ್ರೇಟ್!
ಸಚಿನ್ ತಾವು ಸಂಸದರಾಗಿ ಗಳಿಸಿದ್ದ ವೇತನ, ಇತರ ಭತ್ಯೆಗಳ ಮೊತ್ತ ಸೇರಿದಂತೆ ಸುಮಾರು 90 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ಸಂಸದರಾಗಿ ಗಳಿಸಿದ ವೇತನವನ್ನು ಸ್ವಲ್ಪವೂ ಸಚಿನ್ ತಮ್ಮ ಸ್ವಂತ ಅಗತ್ಯಕ್ಕೆ ಬಳಸಲಿಲ್ಲ.
ಸಂಸದರಾಗಿದ್ದಾಗ ಎರಡು ಗ್ರಾಮಗಳನ್ನು ದತ್ತು ಪಡೆದು ಕುಗ್ರಾಮವಾಗಿದ್ದ ಆ ಗ್ರಾಮಗಳನ್ನು ಸಂಪೂರ್ಣವಾಗಿ ಆಧುನಿಕ ಮೂಲ ಸೌಕರ್ಯಗಳನ್ನೊದಗಿಸಿಕೊಟ್ಟಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಕಾಶ್ಮೀರದ ಶಾಲೆಯೊಂದಕ್ಕೆ 40 ಲಕ್ಷ ರೂ. ಕೊಡುಗೆ ನೀಡಿದ್ದರು. ಸಂಸತ್ ಕಲಾಪಕ್ಕೆ ಹಾಜರಾಗಿಯೂ ಕ್ಷೇತ್ರಕ್ಕೆ ನಯಾ ಪೈಸೆ ಉಪಕಾರ ಮಾಡದ ಕೆಲವು ಸಂಸದರಿಗೆ ಹೋಲಿಸಿದರೆ ಸಚಿನ್ ಪ್ರತ್ಯೇಕವಾಗಿ ನಿಲ್ಲುತ್ತಾರೆ.