ಕೆಎಲ್ ರಾಹುಲ್ ಬಂದೊಡನೇ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದಿಂದ ಔಟ್

ಶನಿವಾರ, 9 ಸೆಪ್ಟಂಬರ್ 2023 (09:10 IST)
ಕೊಲೊಂಬೋ: ಏಷ್ಯಾ ಕಪ್ ನಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ರನ್ನು ಮರಳಿ ತವರಿಗೆ ಕಳುಹಿಸಲಾಗಿದೆ.

ಕೆಎಲ್ ರಾಹುಲ್ ಸ್ಥಾನದಲ್ಲಿ ಮೀಸಲು ಆಟಗಾರನಾಗಿ ಸಂಜು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಇದುವರೆಗೆ ಆಡುವ ಅವಕಾಶ ದೊರೆತಿರಲಿಲ್ಲ.

ಇದೀಗ ಕೆಎಲ್ ರಾಹುಲ್ ಫಿಟ್ ಆಗಿ ತಂಡಕ್ಕೆ ವಾಪಸ್ ಆಗಿರುವುದರಿಂದ ಸಂಜು ಸ್ಯಾಮ್ಸನ್ ರನ್ನು ಭಾರತಕ್ಕೆ ಕಳುಹಿಸಲಾಗಿದೆ. ನಾಳೆ ಪಾಕ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಕಣಕ್ಕಿಳಿಯುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ