ಕೊಹ್ಲಿ ಜೊತೆ ಫುಟ್ಬಾಲ್ ಆಡಲು ಬಂದ ವಿಶೇಷ ಅತಿಥಿ!

ಶನಿವಾರ, 9 ಸೆಪ್ಟಂಬರ್ 2023 (08:40 IST)
Photo Courtesy: Twitter
ಕೊಲೊಂಬೋ: ಏಷ್ಯಾ ಕಪ್ ನಲ್ಲಿ ಸೂಪರ್ ಫೋರ್ ಹಂತದ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಪಾಳಯಕ್ಕೆ ವಿಶೇಷ ಅತಿಥಿಯ ಆಗಮನವಾಗಿದೆ.

ಕೊಲೊಂಬೋದಲ್ಲಿ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಆಟಗಾರರ ಜೊತೆ ಸೇರಿದ್ದು ಒಂದು ಪುಟಾಣಿ ನಾಯಿ. ಕ್ರಿಕೆಟಿಗರು ಫುಟ್ಬಾಲ್ ಆಡುತ್ತಿದ್ದರೆ ನಾಯಿ ಕೂಡಾ ಬಾಲ್ ಜೊತೆ ಆಡುತ್ತಿತ್ತು.

ಈ ನಾಯಿ ವಿಶೇಷವಾಗಿ ವಿರಾಟ್ ಕೊಹ್ಲಿ ಮನಸ್ಸು ಗೆದ್ದಿದೆ. ನಾಯಿಯನ್ನು ಮುದ್ದು ಮಾಡಿದ ಕೊಹ್ಲಿ ಬಳಿಕ ಅದರ ಜೊತೆ ಕೆಲವು ಹೊತ್ತು ಆಟವಾಡಿ ಖುಷಿಪಟ್ಟರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ