ಏಕದಿನ ವಿಶ್ವಕಪ್ ಗೆ ಗೋಲ್ಡನ್ ಟಿಕೆಟ್ ಪಡೆದ ಸಚಿನ್ ತೆಂಡುಲ್ಕರ್ ಅಮಿತಾಭ್ ಬಚ್ಚನ್

ಶುಕ್ರವಾರ, 8 ಸೆಪ್ಟಂಬರ್ 2023 (15:51 IST)
Photo Courtesy: Twitter
ಮುಂಬೈ: ಈ ಬಾರಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಗಣ್ಯರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿ ಪಂದ್ಯ ವೀಕ್ಷಿಸಲು ಆಹ್ವಾನಿಸುತ್ತಿದೆ.

ಬಿಸಿಸಿಐ ಕಾರ್ಯರ್ಶಿ ಜಯ್ ಶಾ ಗಣ್ಯರಿಗೆ ಗೋಲ್ಡನ್ ಟಿಕೆಟ್ ಗೌರವ ನೀಡುತ್ತಿದ್ದಾರೆ. ವಿಶ್ವಕಪ್ ಕೂಟಕ್ಕೆ ವಿಶೇಷ ಸಾಧಕರನ್ನು ಆಹ್ವಾನಿಸುವುದು ಬಿಸಿಸಿಐ ಯೋಜನೆಗಳಲ್ಲಿ ಒಂದು.

ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಈಗಾಗಲೇ ಸ್ವತಃ ಜಯ್ ಶಾ ಗೋಲ್ಡನ್ ಟಿಕೆಟ್ ನೀಡಿ ಗೌರವಿಸಿದ್ದಾರೆ. ಇನ್ನಷ್ಟು ಗಣ್ಯರಿಗೆ ಗೋಲ್ಡನ್ ಟಿಕೆಟ್ ನೀಡಿ ಗೌರವಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ