ಲಂಡನ್ ನ ಎಡ್ಜ್ ಬ್ಯಾಸ್ಟನ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸಹ ವೀಕ್ಷಕ ವಿವರಣೆಗಾರರಾಗಿದ್ದ ಸೌರವ್ ಗಂಗೂಲಿ ಹಾಗೂ ಶೇನ್ ವಾರ್ನ್ ಮಳೆ ವಿರಾಮದ ವೇಳೆ ಸ್ಟುಡಿಯೋದಲ್ಲಿ ಮಲಗಿದ್ದರು. ಈ ವೇಳೆ ತಮ್ಮ ಮೊಬೈಲ್ ಮೂಲಕ ಫೋಟೋ ತೆಗೆದ ವೀರೂ ಚಿತ್ರವನ್ನು ಟ್ವಿಟರ್ನಲ್ಲಿ ಹಾಕಿ ‘ಕನಸು ಕಾಣುವುದರಿಂದಲೇ ಭವಿಷ್ಯ ರೂಪುಗೊಳ್ಳುವುದು. ಈ ದಿಗ್ಗಜರು ಸಿಕ್ಕಿರುವ ಈ ಬಿಡುವಿನಲ್ಲೂ ನಿದ್ದೆ ಮಾಡುತ್ತಾ, ಕನಸು ಕಾಣುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.